ನವದೆಹಲಿ, ಜ.31 (DaijiworldNews/AK): ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರುವರಿ 1, ಶನಿವಾರದಂದು ಬಜೆಟ್ ಮಂಡಿಸುತ್ತಿದ್ದಾರೆ. ಇದು ಅವರ ಸತತ ಎಂಟನೇ ಬಜೆಟ್ ಮಂಡನೆ.

ಆರ್ಥಿಕತೆಗೆ ಚುರುಕು ಮುಟ್ಟಿಸುವ ಬಹುದೊಡ್ಡ ಸವಾಲು ಮತ್ತು ನಿರೀಕ್ಷೆಗಳು ಈ ಬಜೆಟ್ನಲ್ಲಿವೆ. ಮಧ್ಯಮ ವರ್ಗದವರ ಮೇಲಿರುವ ಅಪಾರ ತೆರಿಗೆ ಹೊರೆಯ ಭಾರ ಇಳಿಸುವ ಅಪೇಕ್ಷೆಯೂ ಇದೆ. ಆಲ್ಲದೇ ವಿವಿಧ ಉದ್ಯಮಗಳು ಹೆಚ್ಚಿನ ಉತ್ತೇಜನಕ್ಕಾಗಿ ಕಾಯುತ್ತಿವೆ. ಮೂಲಸೌಕರ್ಯಗಳ ಮೇಲೆ ಹೆಚ್ಚಿನ ಗಮನ ಹರಿಸಬೇಕೆಂಬ ಒತ್ತಡವೂ ಇದೆ. ಇಷ್ಟೆಲ್ಲಾ ನಿರೀಕ್ಷೆ, ಅಪೇಕ್ಷೆ, ಒತ್ತಡಗಳ ನಡುವೆ ನಿರ್ಮಲಾ ಸೀತಾರಾಮನ್ ತಮ್ಮ ಬಜೆಟ್ನಲ್ಲಿ ಯಾವುದಕ್ಕೆ ಹೆಚ್ಚು ಗಮನ ಕೊಡಬಹುದು ಎನ್ನುವ ಕುತೂಹಲ ಹೆಚ್ಚಿಸಿದೆ.
ನಾಳೆ ಫೆಬ್ರುವರಿ 1, ಶನಿವಾರ ಬೆಳಗ್ಗೆ 11 ಗಂಟೆಗೆ ನಿರ್ಮಲಾ ಸೀತಾರಾಮನ್ ಅವರಿಂದ ಸಂಸತ್ತಿನಲ್ಲಿ ಬಜೆಟ್ ಮಂಡನೆ ಆರಂಭವಾಗುತ್ತದೆ.