ನವದೆಹಲಿ, ಫೆ.01 (DaijiworldNews/AA): ಈ ಬಾರಿಯ ಕೇಂದ್ರ ಬಜೆಟ್ನಲ್ಲಿ ಆದಾಯ ತೆರಿಗೆ ದಾರರರಿಗೆ ಬಂಪರ್ ಆಫರ್ ನೀಡಲಾಗಿದ್ದು, ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು ಏರಿಕೆ ಮಾಡಲಾಗಿದೆ. 12 ಲಕ್ಷದವರೆಗೆ ಸಂಪೂರ್ಣ ತೆರಿಗೆಯಲ್ಲಿ ಡೊಡ್ಡ ವಿನಾಯತಿ ನೀಡಲಾಗಿದೆ.

12 ಲಕ್ಷ ರೂಪಾಯಿವರೆಗೂ ಆದಾಯ ತೆರಿಗೆ ಇಲ್ಲ 4 ಲಕ್ಷದಿಂದ 8 ಲಕ್ಷದವರೆಗೆ ಶೇ.5ರಷ್ಟು ತೆರಿಗೆ 8 ಲಕ್ಷದಿಂದ 11 ಲಕ್ಷದವರೆಗೆ ಶೇ.10ರಷ್ಟು ತೆರಿಗೆ 12 ಲಕ್ಷದಿಂದ 15 ಲಕ್ಷದವರೆಗೆ ಶೇ.15ರಷ್ಟು ತೆರಿಗೆ 15 ಲಕ್ಷದಿಂದ 20 ಲಕ್ಷದವರೆಗೆ ಶೇ.20ರಷ್ಟು ತೆರಿಗೆ 20 ಲಕ್ಷದಿಂದ 24 ಲಕ್ಷದರೆಗೆ ಶೇ.25ರಷ್ಟು ತೆರಿಗೆ 24 ಲಕ್ಷ ಮೇಲ್ಪಟ್ಟ ಆದಾಯಕ್ಕೆ ಶೇ.30ರಷ್ಟು ತೆರಿಗೆ ಇರಲಿದೆ.
ಟಿವಿ, ಮೊಬೈಲ್, ಎಲೆಕ್ಟ್ರಿಕ್ ಕಾರುಗಳು, ಔಷಧಿ ಮತ್ತು ಭಾರತದಲ್ಲಿ ತಯಾರಿಸಿದ ಬಟ್ಟೆಗಳು, ಚರ್ಮದ ವಸ್ತುಗಳೂ ಅಗ್ಗವಾಗಲಿವೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಹೊಸ ಆದಾಯ ತೆರಿಗೆ ಮಸೂದೆಯು ಮಧ್ಯಮ ವರ್ಗದ ಮೇಲೆ ಕೇಂದ್ರೀಕೃತವಾಗಿರುತ್ತದೆ. ಹಿರಿಯ ನಾಗರಿಕರಿಗೆ ತೆರಿಗೆ ವಿನಾಯಿತಿಯನ್ನು 50,000 ರೂ.ನಿಂದ 1 ಲಕ್ಷ ರೂ.ಗೆ ಹೆಚ್ಚಿಸಲಾಗುತ್ತಿದೆ ಎಂದು ಅವರು ಘೋಷಿಸಿದ್ದಾರೆ.
ವಿಮಾ ವಲಯದಲ್ಲಿ ಎಫ್ಡಿಐ ಮಿತಿಯನ್ನು 74 ಶೇ.ದಿಂದ 100 ಶೇ.ಕ್ಕೆ ಹೆಚ್ಚಿಸಲಾಗುವುದು. 36 ಜೀವ ರಕ್ಷಕ ಔಷಧಗಳಿಗೆ ಕಸ್ಟಮ್ಸ್ ಸುಂಕದಿಂದ ಸಂಪೂರ್ಣವಾಗಿ ವಿನಾಯಿತಿ ನೀಡಲಾಗುವುದು ಎಂದಿದ್ದಾರೆ.
ರಾಜ್ಯಗಳಿಗೆ 50 ವರ್ಷಗಳ ಬಡ್ಡಿ ರಹಿತ ಸಾಲಕ್ಕಾಗಿ 1.5 ಲಕ್ಷ ಕೋಟಿ ರೂ. ಮೀಸಲಿಡಲಾಗುತ್ತದೆ ಎಂದು ಸಚಿವೆ ತಿಳಿಸಿದ್ದಾರೆ.
ಈ ಬಾರಿಯ ಬಜೆಟ್ನಲ್ಲಿ ಜೀನ್ ಬ್ಯಾಂಕ್ ಸ್ಥಾಪನೆಗೆ ಒತ್ತು ನೀಡಲಾಗಿದೆ. ಆ ಮೂಲಕ ಅನುವಂಶೀಯ ಕಾಯಿಲೆಗಳ ಸಂಶೋಧನೆ ಸಾಧ್ಯ. ಐಐಟಿ, ಐಐಎಸ್ಸಿಯಲ್ಲಿ ಹೆಚ್ಚುವರಿ ಸಂಶೋಧನೆಗೆ ಅನುದಾನ, ಭಾರತೀಯ ಜ್ಞಾನ ಸಂಪತ್ತಿನ ಬ್ಯಾಂಕ್ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.
ಈ ಬಾರಿ ಬಜೆಟ್ನಲ್ಲಿ ಪ್ರವಾಸೋಧ್ಯಮಕ್ಕೆ ಒತ್ತು ನೀಡಲಾಗುತ್ತದೆ. ರಾಜ್ಯ ಸರ್ಕಾರಗಳ ಸಹಯೋಗದೊಂದಿಗೆ 50 ಪ್ರವಾಸಿ ತಾಣಗಳ ಉತ್ತೇಜನ. ಹೋಟೆಲ್ ನಿರ್ಮಾಣ ಹಾಗೂ ಇತರ ಮೂಲಸೌಕರ್ಯಕ್ಕೆ ಒತ್ತು ನೀಡಲಾಗಿದೆ. ಮುದ್ರಾ ಯೋಜನೆ ಮೂಲಕವೂ ಪ್ರವಾಸಿ ತಾಣಗಳ ಅಭಿವೃದ್ಧಿ. ವೈದ್ಯಕೀಯ ಪ್ರವಾಸೋದ್ಯಮಕ್ಕೆ ಖಾಸಗಿ ಪಾಲುದಾರಿಕೆ.
ಬಿಹಾರಕ್ಕೆ ಗ್ರೀನ್ ಫೀಲ್ಡ್ ವಿಮಾನ ನಿಲ್ದಾಣ ಮಂಜೂರು ಮಾಡಲಾಗಿದೆ. ಪಟ್ನಾ ಐಐಟಿ ವಿಸ್ತರಣೆಗೆ ಅನುದಾನ ಘೋಷಣೆ. ಬಿಹಾರದ 500 ಹೆಕ್ಟೇರ್ ಜಮೀನಿಗೆ ನೀರಾವರಿ ಯೋಜನೆ. ಉಡಾನ್ ಯೋಜನೆಗೆ ಹೆಚ್ಚಿನ ಉತ್ತೇಜನ, ಗ್ರೀನ್ಫೀಲ್ಡ್ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಒತ್ತು. ಮುಂದಿನ ಹತ್ತು ವರ್ಷಗಳಲ್ಲಿ ಈಗಿರುವುದಕ್ಕಿಂತ 4 ಕೋಟಿ ಹೆಚ್ಚುವರಿ ಪ್ರಯಾಣಿಕರ ಗುರಿ. ಗಿಗ್ ಕಾರ್ಮಿಕರಿಗೆ ಆರೋಗ್ಯ ವಿಮೆ ಸೌಲಭ್ಯ ವಿಸ್ತರಣೆ. 1 ಕೋಟಿ ಗರ್ಭಿಣಿಯರು ಹಾಗೂ ಹಾಲುಣಿಸುವ ತಾಯಂದರಿಗೆ ವಿಶೇಷ ಯೋಜನೆಯನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ.
ಗ್ರಾಮೀಣ ಭಾಗದಲ್ಲಿರುವ ಎಲ್ಲಾ ಪ್ರಾಥಮಿಕ ಶಾಲೆಗಳಿಗೆ ಬ್ರಾಡ್ಬ್ಯಾಂಡ್ ಸಂಪರ್ಕ. ಎಲ್ಲ ಜಿಲ್ಲೆಗಳಲ್ಲಿ ಡೇ ಕೇರ್ ಕ್ಯಾನ್ಸರ್ ಸೆಂಟರ್ ಸ್ಥಾಪಿಸಲಾಗುವುದು. ಅಸ್ಸಾಂನಲ್ಲಿ 12.7 ಲಕ್ಷ ಮೆಟ್ರಿಕ್ ಟನ್ ಸಾಮರ್ಥ್ಯದ ಯೂರಿಯಾ ಪ್ಲಾಂಟ್ ಆರಂಭಿಸಲಾಗುತ್ತದೆ.