ವಿಜಯಪುರ, ಫೆ.02 (DaijiworldNews/AA): ಕರ್ನಾಟಕದಲ್ಲಿ ರಾಜಕಾರಣ ಗಬ್ಬೆದ್ದು ಹೋಗಿದೆ ಎಂದು ಮಾಜಿ ಡಿಸಿಎಂ ಕೆ.ಎಸ್ ಈಶ್ವರಪ್ಪ ಬೇಸರ ವ್ಯಕ್ತಪಡಿಸಿದ್ದಾರೆ.

ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆ ಪಕ್ಷ ಈ ಪಕ್ಷ ಅಲ್ಲ, ಎಲ್ಲ ಪಕ್ಷಗಳು ಇದೆ ರೀತಿ ಆಗಿದೆ. ಎಲ್ಲ ಕಡೆ ಗುಂಪುಗಾರಿಕೆ ನಡೆದಿದೆ. ಹೈಕಮಾಂಡ್ ಏನು ಮಾಡುತ್ತಿದೆ ಗೊತ್ತಿಲ್ಲ. ಬಿಜೆಪಿ ಏನು ಮಾಡುತ್ತಿದೆ. ಹಿಂದುತ್ವದ ಅಡಿಯಲ್ಲಿ ಸಾಗಿತ್ತು. ಆದರೆ ಈಗ ಎಲ್ಲ ಜಾತಿ ಮೇಲೆ ನಡೆದಿದೆ. ಬಿಜೆಪಿ ಕಟ್ಟಿದ ಹಿರಿಯ ನಾಯಕರು ಈಗ ಸೈಡ್ ಲೈನ್ ಆಗಿದ್ದಾರೆ ಎಂದರು.
ಕಾಂಗ್ರೆಸ್ನಲ್ಲಿ ಕೂಡ ಗುಂಪುಗಾರಿಕೆ ಇದೆ. ಒಂದು ಕಡೆ ಸಿದ್ದರಾಮಯ್ಯ, ಇನ್ನೊಂದೆಡೆ ಡಿಕೆಶಿಯವರ ಗುಂಪುಗಳಿವೆ. ಡಿಕೆಶಿಗೆ ಪಕ್ಷದಲ್ಲಿ ಯಾವುದೆ ಬೆಲೆ ಇಲ್ಲ ಎಂದು ತಿಳಿಸಿದರು.