ರಾಮನಗರ, ಫೆ.02(DaijiworldNews/TA): ಯಾರೊಬ್ಬರೂ ಲಂಚ ನೀಡಬೇಡಿ ನಾವು ಮನೆ ಕೊಡಿಸುತ್ತೇವೆ. ಲಂಚ ಬೇಡ, ನಾವು ನಗರದಲ್ಲಿ ಅಭಿವೃದ್ಧಿ ಮಾಡುತ್ತೇವೆ ಮತ್ತು ಜನತೆಗಾಗಿ ಪ್ರಾಮಾಣಿಕ ಸೇವೆ ಮಾಡುವುದಾಗಿ ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿದರು.

ರಾಮನಗರದಲ್ಲಿ ನಡೆದ ಕಾಂಗ್ರೆಸ್ ಕೃತಜ್ಞತಾ ಸಮಾವೇಶದಲ್ಲಿ, ಡಿ.ಕೆ ಶಿವಕುಮಾರ್ ಅವರು ಜನತೆಗೆ ಭರವಸೆ ನೀಡಿದರು. ಜೊತೆಗೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ವಿರುದ್ಧವೂ ವಾಗ್ದಾಳಿ ನಡೆಸಿದರು. "ಕನ್ನಡನಾಡು ಜನತೆ ಎಂದು ಮಾತನಾಡುತ್ತಿದ್ದಾರೆ, ಆದರೆ ನೀವು ಎರಡು ಬಾರಿ ಶಾಸಕರಾಗಿದ್ದರೂ ನಿಮ್ಮ ಕ್ಷೇತ್ರಕ್ಕೆ ಏನು ಕೊಡುಗೆ ನೀಡಿದ್ದೀರಿ?" ಎಂದು ಪ್ರಶ್ನಿಸಿ, "ಸರ್ಕಾರಿ ಶಾಲೆಗೆ 1 ಎಕರೆ ಜಾಗ ಕೊಟ್ಟಿದ್ದೀರಾ?" ಎಂದು ಹೇಳಿದರು. ಬಿಜೆಪಿ ಮತ್ತು ಜೆಡಿಎಸ್ನ ರಾಜಕಾರಣ ಬಗ್ಗೆ ತೀವ್ರ ಟೀಕಿಸಿದರು.
ಹಾಲಿನ ದರ ಹೆಚ್ಚಳದ ವಿಚಾರದಲ್ಲಿ, "ಹಾಲಿನ ಬೆಲೆಯ ಮೇಲೂ ಗಮನ ಹರಿಸಲಾಗುವುದು," ಎಂದು ಭರವಸೆ ನೀಡಿದರು. "ನಾವು ಕ್ಷೇತ್ರದ ಇತಿಹಾಸದಲ್ಲಿ ದೊಡ್ಡ ಬಹುಮತ ಹೊಂದಿದ್ದೇವೆ. ಮುಂದಿನ ಬೆಳವಣಿಗೆಗಳಿಗೆ ನಾವು ಇನ್ನಷ್ಟು ಕೆಲಸ ಮಾಡುತ್ತೇವೆ," ಎಂದರು. ನಂತರ, "ನೀವು ಕೊಡುವ ಶಕ್ತಿಗೆ ನಾವು ಕೃತಜ್ಞತೆ ಸಲ್ಲಿಸುತ್ತಿದ್ದೇವೆ" ಎಂದು ಅವರು ತಮ್ಮ ಸಮಾವೇಶದ ಮೂಲಕ ದೇಶದ ಅಭಿವೃದ್ಧಿಯಲ್ಲಿ ಮುಖ್ಯ ಪಾತ್ರವಹಿಸುವ ಭರವಸೆ ನೀಡಿದರು.