ದೆಹಲಿ, ಫೆ.09 (DaijiworldNews/AA): ದೆಹಲಿ ಮುಖ್ಯಮಂತ್ರಿ ಸ್ಥಾನಕ್ಕೆ ಅತಿಶಿ ಮರ್ಲೆನಾ ಇಂದು ರಾಜೀನಾಮೆ ನೀಡಲಿದ್ದು, ಲೆಫ್ಟಿನೆಂಟ್ ಗವರ್ನರ್ಗೆ ತಮ್ಮ ರಾಜೀನಾಮೆಯನ್ನು ಸಲ್ಲಿಸಿದ್ದಾರೆ.

ಶನಿವಾರ ಪ್ರಕಟವಾದ ಚುನಾವಣಾ ಫಲಿತಾಂಶದ ಪ್ರಕಾರ ಬಿಜೆಪಿ 48 ಸ್ಥಾನಗಳನ್ನು ಮತ್ತು ಎಎಪಿ 22 ಸ್ಥಾನಗಳನ್ನು ಪಡೆದಿದೆ.
ಬಿಜೆಪಿ ಇನ್ನೂ ದೆಹಲಿ ಮುಖ್ಯಮಂತ್ರಿಯ ಹೆಸರನ್ನು ಘೋಷಿಸಿಲ್ಲ. ದೆಹಲಿ ಬಿಜೆಪಿ ಅಧ್ಯಕ್ಷರು ಇಂದು ಸಂಜೆ ಎಲ್ಲಾ ವಿಜೇತ ಶಾಸಕರನ್ನು ಭೇಟಿ ಮಾಡಲಿದ್ದು, ಪ್ರಧಾನಿ ಮೋದಿ ವಿದೇಶ ಪ್ರವಾಸ ಮುಗಿಸಿ ಹಿಂದಿರುಗಿದ ಬಳಿಕ ದೆಹಲಿಯಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ.