ರಾಜಸ್ಥಾನ, ಫೆ.13 (DaijiworldNews/AA): ಭಾರತದಲ್ಲಿನ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಯುಪಿಎಸ್ಸಿ ಕೂಡ ಒಂದಾಗಿದೆ. ಇದು ಐಎಎಸ್, ಐಪಿಎಸ್ ಮತ್ತು ಐಎಫ್ಎಸ್ನಂತಹ ಉನ್ನತ ಸರ್ಕಾರಿ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತದೆ. ಈ ಕಠಿಣ ಪರೀಕ್ಷೆಯನ್ನು ಬರೆದು ಐಎಎಸ್ ಅಧಿಕಾರಿಯಾದ ಗಾರ್ಗಿ ಜೈನ್ ಅವರ ಯಶೋಗಾಥೆ ಇದು.

ಗಾರ್ಗಿ ಜೈನ್ ಅವರು ದೇಶ ಸೇವೆ ಮಾಡುವ ತಮ್ಮ ಕನಸನ್ನು ನನಸಾಗಿಸಿಕೊಳ್ಳಲು ಮೈಕ್ರೋಸಾಫ್ಟ್ನಲ್ಲಿನ ಉನ್ನತ ಸಂಬಳದ ಉದ್ಯೋಗವನ್ನು 2012 ರಲ್ಲಿ ತೊರೆದರು. ಬಳಿಕ 2014 ರಲ್ಲಿ ಯುಪಿಎಸ್ಸಿ ಪರೀಕ್ಷೆ ಬರೆದ ಅವರು 45ನೇ ರ್ಯಾಂಕ್ ಪಡೆದು ರಾಜ್ಥಾನದ ಅಲ್ವಾರ್ ಜಿಲ್ಲೆಗೆ ಹೆಮ್ಮೆ ತಂದರು
ಗಾರ್ಗಿ ಜೈನ್ ಅವರ ಯುಪಿಎಸ್ಸಿ ಪರೀಕ್ಷೆ ಬರೆಯುವ ಪ್ರಯಾಣ ಸುಲಭವಾಗಿರಲಿಲ್ಲ. ಅವರು ತಮ್ಮ ಮೊದಲ ಪ್ರಯತ್ನದಲ್ಲಿ ಕೇವಲ 12 ಅಂಕಗಳಿಂದ ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುವಲ್ಲಿ ವಿಫಲರಾಗುತ್ತಾರೆ. ಆದರೆ ಅವರು ಛಲ ಬಿಡದೆ ಕಠಿಣ ಪರಿಶ್ರಮದಿಂದ ತಮ್ಮ ಎರಡನೇ ಪ್ರಯತ್ನದಲ್ಲಿ ಉತ್ತೀರ್ಣರಾಗುವಲ್ಲಿ ಯಶಸ್ವಿಯಾಗುತ್ತಾರೆ.
ಗಾರ್ಗಿ ಅವರ ಅವರ ತಂದೆ ರವೀಂದ್ರ ಜೈನ್ ಎನ್ಸಿಡಿಸಿಯಲ್ಲಿ ತಂತ್ರಜ್ಞರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ತಾಯಿ ಸಂಗೀತ ಜೈನ್ ಸರ್ಕಾರಿ ಶಾಲೆಯಲ್ಲಿ ಹಿಂದಿ ಉಪನ್ಯಾಸಕರಾಗಿದ್ದಾರೆ. ಗಾರ್ಗಿ ಅವರು 2012 ರ ಬ್ಯಾಚ್ನ ಐಎಎಸ್ ಅಧಿಕಾರಿ ವಿಶಾಲ್ ಗುಪ್ತಾ ಅವರನ್ನು ವಿವಾಹವಾಗಿದ್ದಾರೆ.
ಆರಂಭದಲ್ಲಿ ಕರ್ನಾಟಕ ಕೇಡರ್ನಲ್ಲಿದ್ದ ಗಾರ್ಗಿ ಅವರು ನಂತರ ವಿವಾಹದ ನಂತರ ಗುಜರಾತ್ಗೆ ವರ್ಗಾವಣೆಗೊಂಡರು. ಗಾರ್ಗಿ ಅವರು ಜಿಐಎಲ್ನಲ್ಲಿ ವ್ಯವಸ್ಥಾಪಕ ನಿರ್ದೇಶಕರು ಮತ್ತು ಗುಜರಾತ್ನಲ್ಲಿ ಕೌಶಲ್ಯ ಅಭಿವೃದ್ಧಿ ಮಿಷನ್ನ ನಿರ್ದೇಶಕರಂತಹ ಪ್ರಮುಖ ಸ್ಥಾನಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಇತ್ತೀಚೆಗೆ, ಅವರು ಗುಜರಾತ್ನ ಛೋಟಾಉದೇಪುರದ ಕಲೆಕ್ಟರ್ ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಗಾರ್ಗಿ ಜೈನ್ ಅವರ ಕಥೆಯು ಇತರೆ ಯುಪಿಎಸ್ಸಿ ಅಭ್ಯರ್ಥಿಗಳಿಗೆ ಮಾದರಿಯಾಗಿದೆ.