ನವದೆಹಲಿ, ಫೆ.14 (DaijiworldNews/AK): ಒಬ್ಬಳು ಮಹಿಳೆ ತನ್ನ ಪತಿಯನ್ನು ಹೊರತುಪಡಿಸಿ ಬೇರೆ ಪುರುಷರ ಜೊತೆ ದೈಹಿಕ ಸಂಬಂಧ ಹೊಂದದೆ ಕೇವಲ ಪ್ರೀತಿ, ವಾತ್ಸಲ್ಯದ ಸಂಬಂಧವನ್ನು ಮಾತ್ರ ಹೊಂದಿದ್ದರೆ ಅದು ವ್ಯಭಿಚಾರಕ್ಕೆ ಸಮನಾಗುವುದಿಲ್ಲ ಎಂದು ಮಧ್ಯಪ್ರದೇಶ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ದೈಹಿಕ ಸಂಬಂಧ ಹೊಂದಿದರೆ ಮಾತ್ರ ಅದನ್ನು ಅಕ್ರಮ ಸಂಬಂಧ ಅಥವಾ ವ್ಯಭಿಚಾರ ಎಂದು ಕರೆಯಲು ಸಾಧ್ಯ ಎಂದು ಕೋರ್ಟ್ ತೀರ್ಪು ನೀಡಿದೆ. ತನ್ನ ಹೆಂಡತಿ ಬೇರೊಬ್ಬರನ್ನು ಪ್ರೀತಿಸುತ್ತಿರುವುದರಿಂದ ಆಕೆ ತನ್ನಿಂದ ಜೀವನಾಂಶ ಪಡೆಯಲು ಅರ್ಹಳಲ್ಲ ಎಂದು ಪತಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಮಧ್ಯಪ್ರದೇಶ ಕೋರ್ಟ್ ಈ ತೀರ್ಪು ನೀಡಿದೆ.
ಆ ವ್ಯಕ್ತಿಯ ವಾದವನ್ನು ತಿರಸ್ಕರಿಸಿರುವ ಕೋರ್ಟ್ “ವ್ಯಭಿಚಾರವೆಂದರೆ ಆಕೆ ಪರ ವ್ಯಕ್ತಿಯೊಂದಿಗೆ ಲೈಂಗಿಕ ಸಂಭೋಗವನ್ನು ಹೊಂದಿರಬೇಕು. ಆಕೆ ಕೇವಲ ಪ್ರೀತಿ ಮಾಡುತ್ತಿದ್ದರೆ ಅದು ವ್ಯಭಿಚಾರವೆಂದು ಪರಿಗಣನೆಯಾಗುವುದಿಲ್ಲ ಎಂದು ಮಧ್ಯಪ್ರದೇಶ ಹೈಕೋರ್ಟ್ ನ್ಯಾಯಮೂರ್ತಿ ಜಿ.ಎಸ್. ಅಹ್ಲುವಾಲಿಯಾ ಅಭಿಪ್ರಾಯಪಟ್ಟಿದ್ದಾರೆ.