ಉತ್ತರಾಖಂಡ, ,ಫೆ.14 (DaijiworldNews/AK):ಭಾರತವು ಕ್ರೀಡೆಯಲ್ಲಿ ಅತ್ಯಂತ ಉಜ್ವಲ ಭವಿಷ್ಯವನ್ನು ಹೊಂದಿದೆ ಎಂದು ನಾನು ಧೈರ್ಯವಾಗಿ ಹೇಳುತ್ತೇನೆ. ನಾವು 2036ರಲ್ಲಿ ಯಶಶ್ವಿಯಾಗಿ ಒಲಿಂಪಿಕ್ಸ್ ಅನ್ನು ಆಯೋಜಿಸಲು ಸಿದ್ಧರಿದ್ದೇವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ಉತ್ತರಾಖಂಡದಲ್ಲಿ ನಡೆದ ರಾಷ್ಟ್ರೀಯ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅಮಿತ್ ಶಾ, ಭಾರತಕ್ಕೆ ಕ್ರೀಡಾ ಜಗತ್ತಿನಲ್ಲಿ ಅತ್ಯಂತ ಉಜ್ವಲ ಭವಿಷ್ಯವಿದೆ.
ಕೇವಲ ರಾಷ್ಟ್ರೀಯ ಕ್ರೀಡಾಕೂಟದಿಂದಾಗಿ ಮಾತ್ರವಲ್ಲದೆ ಕ್ರೀಡಾಕೂಟದಲ್ಲಿ ಕ್ರೀಡಾಪಟುಗಳ ಪ್ರದರ್ಶನ ಮತ್ತು ಯಶಸ್ವಿ ಕ್ರೀಡಾಕೂಟವನ್ನು ಆಯೋಜಿಸುವಲ್ಲಿ ಉತ್ತರಾಖಂಡದ ಸಿಎಂ ಧಾಮಿ ಅವರ ನಿರಂತರ ಪ್ರಯತ್ನಗಳಿಂದಾಗಿ ‘ದೇವ ಭೂಮಿ’ಯಾದ ಈ ರಾಜ್ಯ ‘ಕ್ರೀಡಾ ಭೂಮಿ’ ಆಗಿ ರೂಪಾಂತರಗೊಂಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.