ತುಮಕೂರು, ಫೆ.15 (DaijiworldNews/AA): ಬಿಜೆಪಿಗೆ ಹೇಗೆ ಯಡಿಯೂರಪ್ಪರು ಮುಖ್ಯನೋ, ಜೆಡಿಎಸ್ಗೆ ದೇವೇಗೌಡ ಆಂಡ್ ಕಂಪನಿ ಮುಖ್ಯನೋ, ಹಾಗೆನೇ ಸಿಎಂ ಸಿದ್ದರಾಮಯ್ಯ ಆಂಡ್ ಕಂಪನಿ ಕಾಂಗ್ರೆಸ್ಗೆ ಮುಖ್ಯ ಎಂದು ಹೇಳುವುದರ ಮೂಲಕ ಸಿದ್ದರಾಮಯ್ಯರ ಪರ ಸಚಿವ ಕೆಎನ್ ರಾಜಣ್ಣ ಬ್ಯಾಟ್ ಬೀಸಿದ್ದಾರೆ.

ತುಮಕೂರಿನ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯನವರು ದೇವರಾಜು ಅರಸುರವರ ದಾಖಲೆ ಸರಿಗಟ್ಟುತ್ತಾರೆ ಅನ್ನೋದರಲ್ಲಿ ಯಾವುದೇ ಅನುಮಾನ ಬೇಡ ಎಂದಿದ್ದಾರೆ.
ಇದರೊಂದಿಗೆ ದೆಹಲಿ ಭೇಟಿ ವಿಚಾರವಾಗಿ ಮಾತನಾಡಿದ ಅವರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆಯಲ್ಲಿ ಕೆಲ ಬದಲಾವಣೆ ತರುವಂತೆ ಹೈಕಮಾಂಡ್ಗೆ ಸಲಹೆ ನೀಡಿದ್ದೇನೆ. ಆಯಾ ಕ್ಷೇತ್ರದಲ್ಲಿ ಶಾಸಕರು ಯಾವ ಸಮುದಾಯಕ್ಕೆ ಸೇರಿರುತ್ತಾರೋ ಆ ಸಮುದಾಯ ಬಿಟ್ಟು ಬೇರೆ ಸಮುದಾಯಕ್ಕೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಕೊಡಬೇಕು ಎಂದು ಸಲಹೆ ನೀಡಿದ್ದೇನೆ. ನನಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೊಟ್ಟರೆ ನಾನು ಮಂತ್ರಿಗಿರಿ ತೊರೆಯುತ್ತೇನೆ. ಡಿಕೆಶಿ ಅವರಂತೆ ನನನೂ ಎರಡೆರಡು ಸ್ಥಾನಮಾನ ಕೊಡಿ ಎಂದು ನಾನು ಹೈಕಮಾಂಡ್ಗೆ ಕೇಳಿಕೊಂಡಿಲ್ಲ ಎಂದು ಸ್ಪಷ್ಟನೆ ನೀಡಿದರು.
ಕಾಂಗ್ರೆಸ್ ಪಕ್ಷದಲ್ಲಿ ಬಿಜೆಪಿಯಲ್ಲಿರುವಂತೆ ಗುಂಪುಗಾರಿಕೆ, ಅಶಿಸ್ತು ಇಲ್ಲ ಆದರೆ ಭಿನ್ನಮತ ಇದೆ ಎಂದು ಸಚಿವ ಕೆಎನ್ ರಾಜಣ್ಣ ಹೇಳಿದರು. ಬಸನಗೌಡ ಪಾಟೀಲ್ ಯತ್ನಾಳ್ ತಮ್ಮ ಮನಬಂದಂತೆ ಪಕ್ಷದ ಅಧ್ಯಕ್ಷ ವಿಜಯೇಂದ್ರರನ್ನು ಬಯ್ಯುತ್ತಾರೆ, ಮೋಸಗಾರ, ಸುಳ್ಳುಗಾರ, ಪೋರ್ಜರಿ ಮಾಡಿದವನು ಅಂತೆಲ್ಲ ಹೇಳಿದರೂ ಒಂದು ನೋಟೀಸ್ ಕೊಡುವ ಯೋಗ್ಯತೆ ವಿಜಯೇಂದ್ರಗಿಲ್ಲ, ಅವರ ಸ್ಥಾನನಲ್ಲಿ ತಾನಿದ್ದಿದ್ದರೆ ಮರುದಿನ ಬೆಳಗ್ಗೆಯೇ ಯತ್ನಾಳ್ ರನ್ನು ಪಕ್ಷದಿಂದ ಸಸ್ಪೆಂಡ್ ಮಾಡುತ್ತಿದ್ದೆ ಎಂದು. ಸಚಿವ ರಾಜಣ್ಣ ತಮ್ಮ ಮಿನಿಸ್ಟ್ರಿಗೆ ಸಂಬಂಧಿಸಿದ ಮಾತುಗಳಾಡಿದ್ದು ಕನ್ನಡಿಗರು ಕೇಳಿದ್ದಾರೆಯೇ? ಎಂದು ಪ್ರಶ್ನಿಸಿದರು.