ನಾಸಿಕ್, ಫೆ.20(DaijiworldNews/TA): ಕೃಷಿ ಸಚಿವ ಮನಿಕ್ರಾವ್ ಕೋಕಟೆ ಎರಡು ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ. ಸಚಿವ ಹಾಗೂ ಎನ್ಸಿಪಿ ನಾಯಕ ಮನಿಕ್ರಾವ್ ಕೋಕಟೆ ಅವರು 1995 ರಲ್ಲಿ ಸರ್ಕಾರದ ಕೋಟಾ ಅಡಿಯಲ್ಲಿ ಫ್ಲಾಟ್ಗಳನ್ನು ಪಡೆಯಲು ಮೋಸದ ದಾಖಲೆಗಳನ್ನು ಸಲ್ಲಿಸಿದ್ದಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ನಾಸಿಕ್ ನ್ಯಾಯಾಲಯದಿಂದ ಎರಡು ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ.

ಈ ಪ್ರಕರಣವು ಮಾಜಿ ಸಚಿವ ಎಸ್ ಟಿ ದಿಗೋಲೇ ಅವರ ದೂರಿನ ಮೇಲೆ 1995ರಲ್ಲಿ ದಾಖಲುಗೊಂಡಿತ್ತು. ನಾಸಿಕ್ ಜಿಲ್ಲೆಯ ಸತ್ರ ನ್ಯಾಯಾಲಯವು ಕೋಕಟೆ ಮತ್ತು ಅವರ ಸಹೋದರ ಸುನಿಲ್ ಕೋಕಟೆ ಇಬ್ಬರಿಗೂ ದೋಷಿ ಎಂದು ತೀರ್ಪು ನೀಡಿದ್ದು, ₹50,000 ದಂಡ ವಿಧಿಸಿದೆ.
ನ್ಯಾಯಾಲಯ ತೀರ್ಪು ನಂತರ, ಮನಿಕ್ರಾವ್ ಕೋಕಟೆ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು, ಅವರು ಈ ತೀರ್ಪು ವಿರುದ್ಧ ಹೈಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಲು ಮುಂದಾಗಲಿದ್ದಾರೆ ಎಂದು ಹೇಳಿದ್ದಾರೆ. ಈ ಪ್ರಕರಣದಲ್ಲಿ ಉಳಿದ ಇಬ್ಬರು ಆರೋಪಿತರನ್ನು ನ್ಯಾಯಾಲಯ ನಿರ್ದೋಷಿ ಎಂದು ತೀರ್ಪು ನೀಡಿದೆ. ಕೋಕಟೆ ಅವರಿಗೆ ಹೈಕೋರ್ಟ್ನಿಂದ ರಕ್ಷಣೆ ದೊರಕದಿದ್ದರೆ, ಅವರು ಶಾಸಕ ಸ್ಥಾನದಿಂದ ವಜಾ ಆಗುವ ಸಾಧ್ಯತೆ ಇದೆ.