ನವದೆಹಲಿ, ಫೆ.20(DaijiworldNews/TA): ಮುಖ್ಯಮಂತ್ರಿ ರೇಖಾ ಗುಪ್ತಾ ಮತ್ತು ಸಚಿವರು ಪ್ರಮಾಣ ವಚನ ಸ್ವೀಕರಿಸಿದ ಕೆಲವೇ ಗಂಟೆಗಳಲ್ಲಿ, ಹರಿದ್ವಾರ ಮತ್ತು ವಾರಣಾಸಿಯ ಗಂಗಾ ಘಾಟ್ಗಳಲ್ಲಿ ಯಮುನಾ ಆರತಿ ಮಾಡಿದ್ದಾರೆ.

27 ವರ್ಷಗಳ ನಂತರ ಪಕ್ಷದ ಪುನರಾಗಮನದ ಸಂತಸದ ಜೊತೆಗೆ ಶತಮಾನಗಳಷ್ಟು ಹಳೆಯದಾದ ನಗರದ ಜೀವನಾಡಿಯಾಗಿದ್ದ ಯಮುನಾ ನದಿಯನ್ನು ಸ್ವಚ್ಛಗೊಳಿಸುವ ಬಿಜೆಪಿಯ ಭರವಸೆಯನ್ನು ರೇಖಾ ಗುಪ್ತಾ ನೇತೃತ್ವದ ಸರ್ಕಾರ ಪುನರುಚ್ಚರಿಸಿದೆ.
ವಿಧಾನಸಭಾ ಚುನಾವಣೆಗೆ ಮುನ್ನ, ಬಿಜೆಪಿ ಮೂರು ವರ್ಷಗಳಲ್ಲಿ ಯಮುನಾ ನದಿಯನ್ನು ಸ್ವಚ್ಛಗೊಳಿಸುವುದಾಗಿ ಭರವಸೆ ನೀಡಿತ್ತು. ಪಕ್ಷದ ಗೆಲುವಿನ ಸಂಭ್ರಮಾಚರಣೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಈ ಭರವಸೆಯನ್ನು ಬಲಪಡಿಸಿದರು. ಯಮುನಾ ನದಿಯನ್ನು ದೆಹಲಿಯ ಗುರುತಾಗಿ ಮಾಡುವುದಾಗಿ ಪ್ರಧಾನಿ ಮೋದಿ ಭರವಸೆ ನೀಡಿದ್ದರು.
ಪುನರುಜ್ಜೀವನ ಮತ್ತು ನದಿಮುಖದ ಅಭಿವೃದ್ಧಿ ಯೋಜನೆಗಾಗಿ "ಯಮುನಾ ಕೋಶ್" ಸ್ಥಾಪಿಸುವುದಾಗಿ ಬಿಜೆಪಿ ತನ್ನ ಚುನಾವಣಾ ಪ್ರಣಾಳಿಕೆಯಾದ ವಿಕಸಿತ್ ಭಾರತ್ ಸಂಕಲ್ಪ ಪತ್ರದಲ್ಲಿ ಹೇಳಿತ್ತು.