ಮುಂಬೈ, ಫೆ.21 (DaijiworldNews/AK):ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆಗೆ ಬಾಂಬ್ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.

ಮಹಾರಾಷ್ಟ್ರದ ದೆಲ್ಗಾಂವ್ ಮಾಹಿ ಬುಲ್ದಾನಾದ ನಿವಾಸಿಗಳಾದ ಮಂಗೇಶ್ ವಾಯಲ್ (35), ಅಭಯ್ ಶಿಂಗ್ನೆ (22) ಬಂಧಿತ ಆರೋಪಿಗಳು. ಇಬ್ಬರನ್ನೂ ಬುಲ್ದಾನಾ ಪೊಲೀಸರು ಬಂಧಿಸಿದ್ದಾರೆ ಎಂದು ಡಿಸಿಪಿ ದತ್ತ ನಲವಾಡೆ ತಿಳಿಸಿದ್ದಾರೆ.
ಏಕನಾಥ್ ಶಿಂಧೆ ಅವರ ಕಾರಿಗೆ ಬಾಂಬ್ ಹಾಕುವುದಾಗಿ ಗೋರೆಗಾಂವ್ ಮತ್ತು ಜೆ.ಜೆ ಮಾರ್ಗ್ ಪೊಲೀಸ್ ಠಾಣೆಗಳಿಗೆ ಇ-ಮೇಲ್ ಬೆದರಿಕೆ ಸಂದೇಶಗಳು ಬಂದಿದ್ದವು. ಮರಾಠಿ ಭಾಷೆಯಲ್ಲಿದ್ದ ಇ-ಮೇಲ್ಗಳನ್ನು ಬೇರೆ ಬೇರೆ ಹೆಸರುಗಳಲ್ಲಿ ಎರಡೂ ಪೊಲೀಸ್ ಠಾಣೆಗಳಿಗೆ ಆರೋಪಿಗಳು ಕಳುಹಿಸಿದ್ದರು.