ಬೆಂಗಳೂರು, ಫೆ.22 (DaijiworldNews/AK): ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಕರ್ನಾಟಕಕ್ಕೆ ಹಲವಾರು ಭೇಟಿ ಕೊಟ್ಟಿದ್ದರು. ಸೋಲಿನಲ್ಲೂ ಬತ್ತದ ಅವರ ಉತ್ಸಾಹ, ಸೋಲು- ಗೆಲುವನ್ನು ಸಮಾನವಾಗಿ ನೋಡುವ ಅವರ ಜೀವನಕ್ರಮವು ಮಾದರಿ ಎನಿಸುವಂಥದ್ದು ಎಂದು ಶ್ರೀಮತಿ ತೇಜಸ್ವಿನಿ ಅನಂತಕುಮಾರ್ ಅವರು ತಿಳಿಸಿದರು.

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಜೀ ಅವರ ಶತಮಾನೋತ್ಸವ ಕಾರ್ಯಕ್ರಮದ ಪ್ರಯುಕ್ತ ಇಂದು ಅಟಲ್ ಜೀ ಶತಮಾನೋತ್ಸವ ಅಭಿಯಾನದ ಪ್ರಮುಖರು ಇಂದು ಕೇಂದ್ರದ ಮಾಜಿ ಸಚಿವ ಅನಂತಕುಮಾರರ ನಿವಾಸಕ್ಕೆ ತೆರಳಿ ಮಾಹಿತಿ ಸಂಗ್ರಹಿಸಿದರು.
ಬಳಿಕ ಶ್ರೀಮತಿ ತೇಜಸ್ವಿನಿ ಅನಂತಕುಮಾರ್ ಅವರು ತಮ್ಮ ಅನುಭವವನ್ನು ಹಂಚಿಕೊಂಡರು. ವಾಜಪೇಯಿಜಿ ಅವರ ಸರಳತೆಯ ಕುರಿತು ಅವರು ಮೆಚ್ಚುಗೆ ಸೂಚಿಸಿದರು. ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ವಾಜಪೇಯಿಜೀ ಅವರು ನಿರಂತರ ಮಾರ್ಗದರ್ಶನ ಮಾಡುತ್ತಿದ್ದರು ಎಂದು ನೆನಪಿಸಿದರು.
ಅಟಲ್ ಜೀ ಅವರ 100ನೇ ಜನ್ಮದಿನದ ವಿಶಿಷ್ಟ ಸಂದರ್ಭ ಇದಾಗಿದೆ. ಅವರ ಜೀವನದಲ್ಲಿನ ಸರಳತೆ, ಅವರ ವಿಚಾರಧಾರೆಗಳನ್ನು ನಮ್ಮ ಕಾರ್ಯಕರ್ತರು ಅಳವಡಿಸಿಕೊಳ್ಳಬೇಕಿದೆ ಎಂದು ತಿಳಿಸಿದರು. ಇದೇವೇಳೆ ಈ ಸಂದರ್ಭದಲ್ಲಿ ಶ್ರೀಮತಿ ತೇಜಸ್ವಿನಿ ಅವರನ್ನು ಗೌರವಿಸಲಾಯಿತು.