ನವದೆಹಲಿ, ಮಾ. 01(DaijiworldNews/TA): ದೇಶವು ಈಗ ವಿಶ್ವದ ಕಾರ್ಖಾನೆಯಾಗಿ ಹೊರಹೊಮ್ಮುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಇಂದು ಮಹಾಕುಂಭದಂತಹ ದೊಡ್ಡ ಪ್ರಮಾಣದ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಆಯೋಜಿಸುವ ಭಾರತದ ಸಾಮರ್ಥ್ಯವನ್ನು ಪ್ರಧಾನಿ ಉಲ್ಲೇಖಿಸಿದ್ದಾರೆ. ಪ್ರತಿದಿನ ಹೊಸ ದಾಖಲೆಗಳು ನಿರ್ಮಾಣವಾಗುತ್ತಿರುವಾಗ ದೇಶವು ಸುದ್ದಿಗಳನ್ನು ತಯಾರಿಸುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

NXT ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಭಾರತದ ಸಾಂಸ್ಥಿಕ ಮತ್ತು ನಾವೀನ್ಯತೆ ಸಾಮರ್ಥ್ಯಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಜಗತ್ತು ಹೇಗೆ ಉತ್ಸುಕವಾಗಿದೆ ಎಂಬುದನ್ನು ವಿವರಿಸಿದರು. ಜಗತ್ತಿನಾದ್ಯಂತ ಜನರು ಭಾರತಕ್ಕೆ ಭೇಟಿ ನೀಡಲು ಉತ್ಸುಕರಾಗಿದ್ದಾರೆ. ಭಾರತವು ಪ್ರತಿದಿನ ಸಕಾರಾತ್ಮಕ ಸುದ್ದಿಗಳನ್ನು ಸೃಷ್ಟಿಸುವ ದೇಶವಾಗಿದೆ ಎಂಬುವುದಾಗಿ ಪ್ರಧಾನಿ ಮೋದಿ ಹೇಳಿದ್ದಾರೆ.
ಈಗ ಭಾರತವು ವಿಶ್ವ ಶಕ್ತಿಯಾಗಿದೆ, ಕಾರ್ಯಪಡೆಯಲ್ಲ ಎಂದು ಹೇಳಿಕೆ ನೀಡಿದರು . ಭಾರತ ದೇಶವು ಸೆಮಿಕಂಡಕ್ಟರ್ಗಳು ಮತ್ತು ವಿಮಾನ ವಾಹಕಗಳನ್ನು ತಯಾರಿಸುತ್ತಿದೆ. ಮಖಾನಾ ಮತ್ತು ರಾಗಿ, ಆಯುಷ್ ಉತ್ಪನ್ನಗಳಂತಹ ಸೂಪರ್ಫುಡ್ಗಳನ್ನು ಪ್ರಪಂಚದಾದ್ಯಂತ ಜನರು ಸ್ವೀಕರಿಸುತ್ತಾರೆ. ಭಾರತವು ಪ್ರಮುಖ ಆಟೋಮೊಬೈಲ್ ಉತ್ಪಾದಕವಾಗಿದೆ ಮತ್ತು ಅದರ ರಕ್ಷಣಾ ರಫ್ತು ಹೆಚ್ಚುತ್ತಿದೆ” ಎಂಬುವುದಾಗಿ ಪ್ರಧಾನಿ ಮೋದಿ ಹೇಳಿದ್ದಾರೆ.