ಗುಜರಾತ್, ಮಾ.02(DaijiworldNews/TA) : ಸೋಮನಾಥ ದೇವಾಲಯದಲ್ಲಿ ಪ್ರಧಾನಿ ಮೋದಿ ಪ್ರಾರ್ಥನೆ ಸಲ್ಲಿಸಿದರು. ಜಾಮ್ನಗರ ಜಿಲ್ಲೆಯ ಪ್ರಾಣಿಗಳ ರಕ್ಷಣೆ, ಸಂರಕ್ಷಣೆ ಮತ್ತು ಪುನರ್ವಸತಿ ಕೇಂದ್ರವಾದ ವಂಟಾರಕ್ಕೆ ಭೇಟಿ ನೀಡಿದ ನಂತರ ಪ್ರಧಾನಿ ಮೋದಿ ಪ್ರಭಾಸ್ ಪಠಾಣ್ನಲ್ಲಿರುವ 12 ಜ್ಯೋತಿರ್ಲಿಂಗಗಳಲ್ಲಿ ಮೊದಲನೆಯದಾದ ಶಿವ ದೇವಾಲಯದಲ್ಲಿ ದರ್ಶನ ಪಡೆದು ಪ್ರಾರ್ಥನೆ ಸಲ್ಲಿಸಿದರು.

ದೇವಾಲಯ ಭೇಟಿಯ ನಂತರ, ಪ್ರಧಾನಿ ಮೋದಿ ನೆರೆಯ ಜುನಾಗಢ ಜಿಲ್ಲೆಯಲ್ಲಿರುವ ಏಷ್ಯಾಟಿಕ್ ಸಿಂಹಗಳ ಏಕೈಕ ವಾಸಸ್ಥಾನವಾಗಿರುವ ಗಿರ್ ವನ್ಯಜೀವಿ ಅಭಯಾರಣ್ಯದ ಪ್ರಧಾನ ಕಚೇರಿಯಾದ ಸಸಾನ್ಗೆ ತೆರಳಿದರು.
ವಿಶ್ವ ವನ್ಯಜೀವಿ ದಿನವನ್ನು ಆಚರಿಸಲು ಸೋಮವಾರ ಸಸಾನ್ನಲ್ಲಿ ಪ್ರಧಾನಿ ಸಿಂಹ ಸಫಾರಿಗೆ ಹೋಗಿ ರಾಷ್ಟ್ರೀಯ ವನ್ಯಜೀವಿ ಮಂಡಳಿಯ (ಎನ್ಬಿಡಬ್ಲ್ಯೂಎಲ್) ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.