ಬೆಂಗಳೂರು, ಮಾ.03(DaijiworldNews/AK): ನಾನೇ ಮುಖ್ಯಮಂತ್ರಿ ಎಂದು, ಸಿಎಂ ಅವರನ್ನ ಇಳಿಸುತ್ತೇವೆ ಅಂತ ಯಾಕೆ ಸಿದ್ದರಾಮಯ್ಯ ಅವರಿಗೆ ಅಪಮಾನ ಮಾಡ್ತೀರಾ? ಎಂದು ಪರಿಷತ್ ಸದಸ್ಯ ಸಿ.ಟಿ.ರವಿ ವ್ಯಂಗ್ಯವಾಡಿದ್ದಾರೆ.

ವಿಧಾನಸೌಧದಲ್ಲಿ ಡಿಕೆ ಶಿವಕುಮಾರ್ ಸಿಎಂ ಆಗುತ್ತಾರೆ ಎಂಬ ಮೊಯ್ಲಿ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅವರ ಪಕ್ಷ ನಿರ್ಣಯ ಮಾಡಿ ಮುಖ್ಯಮಂತ್ರಿ ಎಂದು ಒಪ್ಪಿದರೆ ಸಿಎಂ ಆಗ್ತಾರೆ. ಹೀಗೆ ಹೇಳುವುದರ ಮೂಲಕ ನಾನೇ ಮುಖ್ಯಮಂತ್ರಿ ಎಂದು, ಸಿಎಂ ಅವರನ್ನ ಇಳಿಸುತ್ತೇವೆ ಅಂತ ಯಾಕೆ ಅಪಮಾನ ಮಾಡ್ತೀರಾ? ಇಳಿಸುವುದಾದರೆ ಒಂದೇ ದಿನ ಇಳಿಸಿ. ಅವರನ್ನು ಕೂರಿಸಿ, ಯಾಕೆ ಸಿದ್ದರಾಮಯ್ಯ ಅವರಿಗೆ ಅಪಮಾನ ಮಾಡ್ತೀರಾ? ಬಜೆಟ್ ಮಂಡಿಸುವ ವೇಳೆ ಈ ರೀತಿ ಆದರೆ ಅಪಮಾನ ಎಂದು ವ್ಯಂಗ್ಯವಾಡಿದರು
ಡಿಕೆಶಿ ನಟ್ಟು ಬೋಲ್ಟ್ ಟೈಟ್ ಮಾಡುತ್ತೇವೆ ಎಂದು ಎಲ್ಲೋ ಒಂದು ಕಡೆ ಲೂಸ್ ಲೂಸಾಗಿ ಮಾತನಾಡಿರಬಹುದು. ಬೆದರಿಕೆ ಹಾಕುವುದು ಗೌರವ ಸಂಗತಿಯೇ? ಕಲಾವಿದರು ಕಾಂಗ್ರೆಸ್ ಜೀತದಾಳುಗಳಲ್ಲ ಎಂದು ಹೇಳಿದರು.