ಹುಬ್ಬಳ್ಳಿ, ಮಾ.05 (DaijiworldNews/AK):ಸಿಎಂ ಸಿದ್ದರಾಮಯ್ಯ ಅವರು ಮಂಡನೆ ಮಾಡುವ ಆಯ-ವ್ಯಯದ ಬಗ್ಗೆ ಯಾವುದೇ ನಿರೀಕ್ಷೆ ಹೊಂದಲು ಸಾಧ್ಯವಿಲ್ಲ. ಗ್ಯಾರಂಟಿಗಳಿಗೆ ಹಣ ಹೊಂದಿಸಲು ಹೆಣಗಾಡುವ ಸರ್ಕಾರ ಹೊಸ ಅಭಿವೃದ್ಧಿ ಯೋಜನೆಗಳಿಲ್ಲದ ಬ್ಯಾಲೆನ್ಸ್ ಶೀಟ್ ಆಯ-ವ್ಯಯವಾಗಲಿದೆ ಎಂದು ಸಂಸದ ಜಗದೀಶ ಶೆಟ್ಟರ್ ಆರೋಪಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರದಲ್ಲಿ ಹಣವೇ ಇಲ್ಲದಿರುವಾಗ ಆಯ-ವ್ಯಯ ಬಗ್ಗೆ ಯಾವ ನಿರೀಕ್ಷೆ ಹೊಂದಲು ಸಾಧ್ಯ.ಯುಕೆಪಿ ಯೋಜನೆ ಗಾತ್ರ 50-84 ಸಾವಿರ ಕೋಟಿ ರೂ.ಹೆಚ್ಚಿದೆ ಸರ್ಕಾರ ಇಷ್ಟು ಹಣ ನೀಡುತ್ತದೆಯೇ ಎಂದು ಪ್ರಶ್ನಿಸಿದರು.
ಗುತ್ತಿಗೆ ಕಾಮಗಾರಿಗಳಲ್ಲಿ ಶೇ.4ರಷ್ಟನ್ನು ಅಲ್ಪಸಂಖ್ಯಾತರಿಗೆ ನೀಡುವ ರಾಜ್ಯ ಸರ್ಕಾರದ ನಿರ್ಧಾರ ತುಷ್ಟೀಕರಣ ಪರಮಾವಧಿ.ಹಿಂದೂ ಭಾವನೆ, ಆಚರಣೆಗಳನ್ನು ಟೀಕಿಸುವ,ಅಲ್ಪಸಂಖ್ಯಾತರನ್ನು ಓಲೈಸುವ ಕಾರ್ಯಕ್ಕೆ ಕಾಂಗ್ರೆಸ್ ನಾಯಕರು ಮುಂದಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿ ಶಾಸಕರು ಸಂಪರ್ಕದಲ್ಲಿದ್ದಾರೆಂದು ಹೇಳು ವ ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಧೈರ್ಯ ವಿದ್ದರೆ ಇಬ್ಬರು ಶಾಸಕರ ಹೇಳಲಿ ನೋಡೋಣ ಎಂದು ಸವಾಲು ಹಾಕಿದರು.