ಬೆಂಗಳೂರು, , ಮಾ.05 (DaijiworldNews/AK):ಬಿಜೆಪಿ ಹಿರಿಯ ನಾಯಕ ಮತ್ತು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಜೀ ಯವರ ದೇಶಭಕ್ತಿ, ಸರಳತೆ, ನಾಯಕತ್ವ ಗುಣಗಳು ಅನುಕರಣಾರ್ಹ ಎಂದು ಕೇಂದ್ರ ಸಚಿವೆ ಕು.ಶೋಭಾ ಕರಂದ್ಲಾಜೆ ಅವರು ತಿಳಿಸಿದರು.

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಜೀ ಶತಮಾನೋತ್ಸವ ಕಾರ್ಯಕ್ರಮದ ಪ್ರಯುಕ್ತ ಇಂದು ಅಟಲ್ ಜೀ ಶತಮಾನೋತ್ಸವ ಅಭಿಯಾನದ ಪ್ರಮುಖರು ಶೋಭಾ ಕರಂದ್ಲಾಜೆ ಅವರನ್ನು ಭೇಟಿ ಮಾಡಿದರು. ಅಲ್ಲದೆ, ಅಟಲ್ ಜೀ ಅವರ ಒಡನಾಟದ ಕುರಿತು ಮಾಹಿತಿ ಸಂಗ್ರಹಿಸಿದರು.
ಶೋಭಾ ಕರಂದ್ಲಾಜೆಯವರು ಅಟಲ್ ಜೀ ಅವರು ಸೇವೆ, ಕಾರ್ಯಕರ್ತರಿಗೆ ಪ್ರೇರಣೆ ನೀಡುವುದು, ಪಕ್ಷದ ಸಂಘಟನೆ ವಿಷಯಗಳಲ್ಲಿ ಮಾರ್ಗದರ್ಶನ ಮಾಡಿದ್ದರು ಎಂದು ನೆನಪಿಸಿದರು.