ಬೆಂಗಳೂರು, ಮಾ.07 (DaijiworldNews/AK): ಸಿಎಂ ಸಿದ್ದರಾಮಯ್ಯ ಅವರು ಶುಕ್ರವಾರ ದಾಖಲೆಯ 16ನೇ ಬಜೆಟ್ ಮಂಡನೆ ಮಾಡಲಿದ್ದಾರೆ. ಇಂದು ಬೆಳಗ್ಗೆ 10:15ಕ್ಕೆ ವಿಧಾನಸಭೆಯಲ್ಲಿ ಆಯವ್ಯಯ ಮಂಡನೆ ಆಗಲಿದೆ.

ಬೆಳಗ್ಗೆ 9:30 ಕ್ಕೆ ತಮ್ಮ ನಿವಾಸದಿಂದ ಬಜೆಟ್ ಮಂಡನೆಗೆ ಸಿಎಂ ಹೊರಡಲಿದ್ದಾರೆ. 10 ಗಂಟೆಗೆ ಸಚಿವ ಸಂಪುಟ ಸಭೆ ನಡೆಯಲಿದೆ. ಸಚಿವ ಸಂಪುಟ ಸಭೆಯಲ್ಲಿ ಬಜೆಟ್ಗೆ ಅನುಮೋದನೆ ಪಡೆದು 10:10 ನಿಮಿಷಕ್ಕೆ ಸರಿಯಾಗಿ ಸದನಕ್ಕೆ ಸಿದ್ದರಾಮಯ್ಯ ಆಗಮಿಸಲಿದ್ದಾರೆ. ಬಜೆಟ್ ಗಾತ್ರ 4 ಲಕ್ಷ ಕೋಟಿ ದಾಟುವ ನಿರೀಕ್ಷೆ ಇದೆ.ಬೆಳಗ್ಗೆ 10:15 ಕ್ಕೆ ಸರಿಯಾಗಿ ಬಜೆಟ್ ಓದಲು ಸಿಎಂ ಆರಂಭಿಸಲಿದ್ದಾರೆ.
ಅಂದಾಜು 3 ಗಂಟೆ 30 ನಿಮಿಷಗಳ ಕಾಲ ಬಜೆಟ್ ಮಂಡನೆ ಮಾಡುವ ಸಾಧ್ಯತೆ ಇದೆ.ರಾಜ್ಯದ ಜನತೆಗೆ ಸಿದ್ದರಾಮಯ್ಯರ ಬಜೆಟ್ ಮೇಲೆ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ