ವಿಜಯಪುರ, ಮಾ.08 (DaijiworldNews/AA): 2025-26ನೇ ಸಾಲಿನ ಬಜೆಟ್ನಲ್ಲಿ ಎಲ್ಲ ಸಮುದಾಯಗಳಿಗೆ ಪೂರಕವಾದ ಬಜೆಟ್ ನೀಡಿದ್ದೇವೆ ಎಂದು ಸಚಿವ ಎಂ.ಬಿ ಪಾಟೀಲ್ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಾರಿ ಬಜೆಟ್ ಹಿಂದುಳಿದವರು, ದಲಿತರಿಗೆ ಕೊಟ್ಟಿದ್ದೇವೆ. ಮುಸ್ಲಿಂ ಬಜೆಟ್ ಎನ್ನುವವರ ಕಣ್ಣು ಹಳದಿಯಾಗಿದೆ ಎಂದರು.
ನಿಮಗೆ ಮುಸ್ಲಿಮರಿಗೆ ನೀಡಿದ್ದು ಮಾತ್ರ ಯಾಕೆ ಕಾಣುತ್ತದೆ? ಬಿಜೆಪಿಯವರು ನಾಲ್ಕು ವರ್ಷ ಏನು ಮಾಡಿದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಪ್ರಿಯಾಂಕ್ ಖರ್ಗೆ ಸರಿಯಾಗಿ ಹೇಳಿದ್ದಾರೆ ಎಂದು ಹೇಳಿದರು.