ಜೈಪುರ, ಮಾ.16(DaijiworldNews/TA): ಮೇವಾರ್ನ ಹಿಂದಿನ ರಾಜಮನೆತನದ ಸದಸ್ಯ ಮತ್ತು HRH ಹೋಟೆಲ್ಗಳ ಸಮೂಹದ ಅಧ್ಯಕ್ಷ ಅರವಿಂದ್ ಸಿಂಗ್ ಮೇವಾರ್ ದೀರ್ಘಕಾಲದ ಅನಾರೋಗ್ಯದ ಕಾರಣ ಉದಯಪುರದಲ್ಲಿ ಭಾನುವಾರ ಮುಂಜಾನೆ ನಿಧನರಾದರು ಎಂದು ಕುಟುಂಬದ ಮೂಲಗಳು ತಿಳಿಸಿವೆ.

ರಜಪೂತ ರಾಜ ಮಹಾರಾಣಾ ಪ್ರತಾಪ್ ಅವರ ವಂಶಸ್ಥರಾದ ಮೇವಾರ್ (81) ಅವರು ದೀರ್ಘಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು ಮತ್ತು ಉದಯಪುರದ ಸಿಟಿ ಪ್ಯಾಲೇಸ್ನಲ್ಲಿರುವ ತಮ್ಮ ನಿವಾಸದಲ್ಲಿ ಚಿಕಿತ್ಸೆಯಲ್ಲಿದ್ದರು ಎನ್ನಲಾಗಿದೆ. ಅವರು ಪತ್ನಿ ವಿಜಯರಾಜ್ ಕುಮಾರಿ, ಪುತ್ರ ಲಕ್ಷ್ಯರಾಜ್ ಸಿಂಗ್ ಮೇವಾರ್ ಮತ್ತು ಪುತ್ರಿಯರಾದ ಭಾರ್ಗವಿ ಕುಮಾರಿ ಮೇವಾರ್ ಮತ್ತು ಪದ್ಮಜಾ ಕುಮಾರಿ ಪರ್ಮಾರ್ ಅವರನ್ನು ಅಗಲಿದ್ದಾರೆ. ಸೋಮವಾರ ಅಂತ್ಯಕ್ರಿಯೆ ನಡೆಯಲಿದೆ.
ಗೌರವಾರ್ಥವಾಗಿ, ಉದಯಪುರ ನಗರ ಅರಮನೆಯನ್ನು ಭಾನುವಾರ ಮತ್ತು ಸೋಮವಾರ ಪ್ರವಾಸಿಗರಿಗೆ ಭೇಟಿ ನಿಷೇಧಿಸಿ ಮುಚ್ಚಲಾಗುವುದು. ಅರವಿಂದ್ ಭಗವಂತ್ ಸಿಂಗ್ ಮೇವಾರ್ ಮತ್ತು ಸುಶೀಲಾ ಕುಮಾರಿ ದಂಪತಿಯ ಕಿರಿಯ ಮಗ. ಅವರ ಹಿರಿಯ ಸಹೋದರ ಮಹೇಂದ್ರ ಸಿಂಗ್ ಮೇವಾರ್ ಕಳೆದ ವರ್ಷ ನವೆಂಬರ್ನಲ್ಲಿ ನಿಧನರಾದರು.