ಬೆಂಗಳೂರು,ಮಾ.18 (DaijiworldNews/AK): ರಾಜ್ಯದಲ್ಲಿ ನಾವು ಸಾರಿಗೆ ದರ 15% ಏರಿಕೆ ಮಾಡಿದರೂ ಕೊಡ ಪಕ್ಕದ ರಾಜ್ಯಗಳಿಗಿಂತ ಕಡಿಮೆ ಇದೆ.ಸಾಮಾನ್ಯ ಸಾರಿಗೆ, ವೇಗದೂತ, ರಾಜಹಂಸ ಡೀಲಕ್ಸ್ ಬಸ್ಸುಗಳು ಒಂದು ಕಿಮೀ ಗೆ ತಗಲುವ ದರಗಳು ಮಹಾರಾಷ್ಟ್ರ, ಆಂಧ್ರಪ್ರದೇಶ ರಾಜ್ಯಗಳಿಗಿಂತ ಕಡಿಮೆ ಇದೆ ಎಂದು ಮುಖ್ಯಮಂತ್ರಿಗಳು ಅಂಕಿಅಂಶಗಳ ಸಮೇತ ವಿವರಿಸಿದರು.

ವಿದ್ಯಾರ್ಥಿಗಳ ಪಾಸ್ ಗಳ ದರವನ್ನು 12 ವರ್ಷಗಳಿಂದ ಹೆಚ್ಚಿಸಿಲ್ಲ. ಬಿಜೆಪಿ ಅವಧಿಯಲ್ಲಿಯೂ ಪ್ರತಿ ವರ್ಷ ಬಸ್ಸಿನ ದರ ಹೆಚ್ಚಿಸಲಾಗಿದೆ. ಡೀಸಲ್ ಬೆಲೆ ಹೆಚ್ಚಿಗೆ ಆದಾಗ ದರಯೇರಿಸಲೇಬೇಕಾಗುತ್ತದೆ. ವೇತನ ಹೆಚ್ಚು ಮಾಡಿದಾಗ ನಷ್ಟಕ್ಕೆ ಸಾರಿಗೆ ನಿಗಮಗಳು ಒಳಗಾಗಿವೆ.
ಹೆಚ್ಚುವರಿ ಅಬಕಾರಿ ಶುಲ್ಕವನ್ನು 31.84 ರೂ.ಗಳಿಗೆ ಹೆಚ್ಚು ಮಾಡಿದರು. ವೇತನ, ಡೀಸೆಲ್ ಬೆಲೆ ಹೆಚ್ಚಳ ಮಾಡಿದಾಗ ಅನಿವಾರ್ಯವಾಗಿ ದರ ಏರಿಸಬೇಕಾಗಿದೆ. ಇಷ್ಟೆಲ್ಲಾ ಇದ್ದರೂ ನಾವು 4900 ಬಸ್ಸುಗಳನ್ನು ಖರೀದಿ ಮಾಡಿದ್ದೇವೆ. ಪ್ರಧಾನಿ ಮೋದಿ ಸರ್ಕಾರ ಡೀಸೆಲ್ ಬೆಲೆಯನ್ನು ಯದ್ವಾ ತದ್ವಾ ಏರಿಸಿದ್ದರಿಂದ ಪ್ರಯಾಣ ದರ ಏರಿಸುವ ಅನಿವಾರ್ಯತೆ ಸೃಷ್ಟಿಯಾಗಿದೆ. ಇದನ್ನು ಹೇಳಿದರೆ ಬಿಜೆಪಿ ಸದಸ್ಯರಿಗೆ ಸಿಟ್ಟು ಬರುತ್ತದೆ.
ಮೆಟ್ರೋ ರೈಲು ದರ ಹೆಚ್ಚಳ: ಮೆಟ್ರೋ ರೈಲು ಕಾರ್ಯಾಚರಣೆ ಮತ್ತು ನಿರ್ವಹಣೆ ಕಾಯ್ದೆ 2005 ರಲ್ಲಿ ಮಾಡಲಾಗಿದೆ. ಕೇಂದ್ರ ಸರ್ಕಾರ ಕಾಲಕಾಲಕ್ಕೆ ನಿವೃತ್ತ ಉಚ್ಚ ನ್ಯಾಯಾಲಯದ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ದರ ನಿಗದಿ ಮಾಡುವ ಸಮಿತಿ ರಚಿಸಬಹುದು ಎಂದು ಇದರಲ್ಲಿ ಹೇಳಲಾಗಿದೆ.
ಬಿಜೆಪಿ ಅಧಿಕಾರದ ಅವಧಿಯಲ್ಲಿ ದರ ನಿಗದಿ ಮಾಡುವ ಬಗ್ಗೆ ಪತ್ರ ಬರೆದು, ಸಮಿತಿ ರಚನೆ ಮಾಡಲಾಗಿದೆ. 16-12-2024 ರಲ್ಲಿ ವರದಿ ಕೊಟ್ಟ ಮೇಲೆ ದರ ಪರಿಷ್ಕರಣೆ ಮಾಡಲಾಗಿದೆ. ನಂತರದಲ್ಲಿ ಇತಿಮಿತಿಯೊಳಗೆ ಸ್ವಲ್ಪ ಬೆಲೆ ಕಡಿಮೆ ಮಾಡಲಾಗಿದೆ. ಒಮ್ಮೆ ಸಮಿತಿ ಶಿಫಾರಸ್ಸು ಮಾಡಿ ಮೇಲೆ ಹಿಂಪಡೆಯಲು ಸಾಧ್ಯವಿಲ್ಲ. ಮೆಟ್ರೋ ದರ ಹೆಚ್ಚಳ ನಮ್ಮ ಕೈಯಲ್ಲಿ ಇಲ್ಲ ಎಂದರು.
ರೈತರ ಆತ್ಮಹತ್ಯೆ: ನಮ್ಮ ಸರ್ಕಾರದ ಅವಧಿಯಲ್ಲಿ ರೈತರ ಆತ್ಮಹತ್ಯೆ ಕಡಿಮೆಯಾಗಿದೆ. ಫೆಬ್ರವರಿ ಅಂತ್ಯದವರೆಗೆ 624 ರೈತರ ಆತ್ಮಹತ್ಯೆಗಳು ನಡೆದಿವೆ. ಅರ್ಹ ಪ್ರಕರಣ 527.ರೈತರ ಆತ್ಮಹತ್ಯೆಗಳು ನಡೆಯಬಾರದು.ರೈತರ ಆತ್ಮಹತ್ಯೆಗಳು ಪೂರ್ಣವಾಗಿ ನಿಲ್ಲಬೇಕೆನ್ನುವುದು ಸರ್ಕಾರದ ಆಶಯ ಎಂದರು.
ಈ ವರ್ಷ 4899 ಬಸ್ಸುಗಳನ್ನು ಹೊಸದಾಗಿ ಸೇರಿಸಿ ಸಾರಿಗೆ ಸಂಸ್ಥೆಯನ್ನು ಬಲಪಡಿಸಿದ್ದೇವೆ.ಅಭಿವೃದ್ಧಿ ಯೋಜನೆಗಳಿಗೂ ಹಣ ಮೀಸಲಿಟ್ಟು, ಗ್ಯಾರಂಟಿಗಳ ಜೊತೆಗೆ ಕರ್ನಾಟಕದ ಪ್ರಗತಿಯನ್ನೂ ಮಾಡಿದ್ದೇವೆ
ನಮ್ಮ ಬಂಡವಾಳ ವೆಚ್ಚ 56000 ಕೋಟಿ ಕಳೆದ ವರ್ಷ ವೆಚ್ಚವಾಗಿದ್ದರೆ 2025-26 ನೇ ಸಾಲಿಗೆ 85000 ಕೋಟಿ ವೆಚ್ಚ ಮಾಡಲಾಗುವುದು ಎಂದರು.
ಬಂಡವಾಳ ವೆಚ್ಚ: 370283 ಕೋಟಿ ಬಜೆಟ್ ನಲ್ಲಿ 56000 ಕೋಟಿ , ಬಂಡವಾಳ ವೆಚ್ಚವಾಗಿದ್ದು ಅಂದರೆ ಶೇ .15.01%, ಮಹಾರಾಷ್ಟ್ರದ ಬಜೆಟ್ 669491 ಕೋಟಿ , ಬಂಡವಾಳ ವೆಚ್ಚ 85292 ಕೋಟಿಗಳು, ಅಂದರೆ ಶೇ. 12.74% , ತಮಿಳುನಾಡು ರಾಜ್ಯದ ಬಜೆಟ್ ಗಾತ್ರ 453682 ಕೋಟಿ, ಬಂಡವಾಳ ವೆಚ್ಚ 48000 ಕೋಟಿ ಅಂದರೆ 10.58% , ತೆಲಂಗಾಣ ಬಜೆಟ್ ಗಾತ್ರ 291159, ಬಂಡವಾಳ ವೆಚ್ಚ 33487 ಕೋಟಿ 11.50%..ಅಂದರೆ ಪಕ್ಕದ ರಾಜ್ಯಗಳಿಗಿಂತ ನಮ್ಮದೇ ಹೆಚ್ಚು. ಅಭಿವೃದ್ಧಿ ಯೋಜನೆಗಳಿಗೂ ಹಣ ಮೀಸಲಿಟ್ಟು, ಗ್ಯಾರಂಟಿಗಳ ಜೊತೆಗೆ ಕರ್ನಾಟಕದ ಪ್ರಗತಿಯನ್ನೂ ಮಾಡಿದ್ದೇವೆ ಎಂದರು.
ಬೆಂಗಳೂರು ಅಭಿವೃದ್ಧಿಗೆ ಉಚ್ಚ ನ್ಯಾಯಾಲಯದವರು ಬಿಜೆಪಿ ಅಧಿಕಾರದಲ್ಲಿದ್ದಾಗ ಏನೇನು ಹೇಳಿದ್ದರು ಎಂದು ತಿಳಿಸಬೇಕಾ ಎಂದು ಪ್ರಶ್ನಿಸಿದ ಸಿಎಂ, 1700 ಕೋಟಿ ವೈಟ್ ಟಾಪಿಂಗ್ ಗೆ, 15 ಲಕ್ಷ ರೂಪಾಯಿಗಳನ್ನು ಗುಂಡಿ ಮುಚ್ಚಲು, ಡಾಂಬರೀಕರಣಕ್ಕೆ 700 ಕೋಟಿ ನೀಡಲಾಗಿದೆ. ಈ ವರ್ಷಕ್ಕೆ 3000 ದ ಜೊತೆಗೆ ನಾಲ್ಕು ಸಾವಿರ ಸೇರಿಸಿ 7000 ಕೋಟಿ ಗಳನ್ನು ಮುಂದಿನ ವರ್ಷಕ್ಕೆ ವೆಚ್ಚ ಮಾಡಲಾಗುತ್ತಿದೆ ಎಂದರು. ನಾವು ನುಡಿದಂತೆ ನಡೆಯುವವರು. ಬಸವರಾಜ ಬೊಮ್ಮಾಯಿ ಯವರಂತೆ ಹಣ ಮೀಸಲಿಟ್ಟು ಒಂದು ರೂಪಾಯಿ ಕೂಡ ಬಿಡುಗಡೆ ಮಾಡದೇ ನಾವು ಇರುವುದಿಲ್ಲ.
ರಾಜ್ಯಪಾಲರು ಸತ್ಯವನ್ನೇ ಹೇಳಿದ್ದಾರೆ. ನಾವು ಸುಳ್ಳು ಹೇಳಿಸಿಲ್ಲ. ರಾಜ್ಯಪಾಲರು ಬರೆದಿದ್ದನ್ನೆಲ್ಲ ಓದುವುದಿಲ್ಲ.