ಬೆಂಗಳೂರು, ಮಾ.29(DaijiworldNews/TA): ಶನಿವಾರ ಥಣಿಸಂದ್ರ ಬಳಿ ಅತಿ ವೇಗವಾಗಿ ಬರುತ್ತಿದ್ದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಕಸದ ಲಾರಿ ಡಿಕ್ಕಿ ಹೊಡೆದು 10 ವರ್ಷದ ಬಾಲಕ ಸಾವನ್ನಪ್ಪಿದ್ದಾನೆ ಎಂದು ವರದಿಯಾಗಿದೆ.

ಆ ಹುಡುಗನನ್ನು ಇಮಾನ್ ಎಂದು ಗುರುತಿಸಲಾಗಿದೆ. ಮಧ್ಯಾಹ್ನ 12.30 ರ ಸುಮಾರಿಗೆ ಥಣಿಸಂದ್ರ ಬಳಿ ಇಮಾನ್ ಮತ್ತು ಆತನ ತಂದೆ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ, ಅವರ ವಾಹನಕ್ಕೆ ಹಿಂದಿನಿಂದ ಅತಿ ವೇಗದಲ್ಲಿ ಬರುತ್ತಿದ್ದ ಬಿಬಿಎಂಪಿ ಕಸದ ಲಾರಿ ಡಿಕ್ಕಿ ಹೊಡೆದಿದೆ.
ಲಾರಿ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ತಕ್ಷಣ, ಬಾಲಕ ವಾಹನದಿಂದ ಬಿದ್ದಿದ್ದಾನೆ ಮತ್ತು ಬಿಬಿಎಂಪಿ ಟ್ರಕ್ ಅವನ ಮೇಲೆ ಹರಿದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬಾಲಕನನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು.ಅದಾಗಲೇ ಬಾಲಕ ಮೃತನಾಗಿದ್ದ ಎಂದು ಅವರು ಹೇಳಿದರು.