ನವದೆಹಲಿ, ಏ.01 (DaijiworldNews/AA): ಬೆಲೆ ಏರಿಕೆ ಮಾಡುತ್ತೇವೆ ಅಂತ ಮುಂಚೆ ಹೇಳಿದ್ದರೆ ಕಾಂಗ್ರೆಸ್ 50 ಸೀಟ್ ಕೂಡ ಗೆಲ್ಲುತ್ತಿರಲಿಲ್ಲ. ಕಾಂಗ್ರೆಸ್ ಆಳ್ವಿಕೆ ಮಾಡಿದ 22 ತಿಂಗಳು, ಅದರಲ್ಲಿ 18 ತಿಂಗಳು ಬೆಲೆ ಏರಿಕೆ ಸುದ್ದಿ ಎಂದು ಪರಿಷತ್ ಸದಸ್ಯ ಸಿ.ಟಿ.ರವಿ ತಿಳಿಸಿದ್ದಾರೆ.

ದೆಹಲಿಯಲ್ಲಿ ಮಾತನಾಡಿದ ಅವರು, ಯುಗಾದಿ, ರಂಜಾಬ್ ಒಟ್ಟಿಗೆ ಬಂತಲ್ಲ ಅದಕ್ಕೆ ಸರ್ಕಾರ ಹೀಗೆ ಮಾಡಿದೆ. ಹಾಲಿನ ಬೆಲೆ, ಆಲ್ಕೋಹಾಲ್ನಿಂದ ಹಿಡಿದು ಎಲ್ಲ ಬೆಲೆ ಏರಿಕೆ ಮಾಡಿದ್ದಾರೆ. ಗ್ಯಾರಂಟಿ ಕೊಡ್ತೀವಿ ಅಂತ ಹೇಳಿದ್ರು. ಹೇಳದೆ ಬೆಲೆ ಏರಿಕೆ ಮೂಲಕ ಬರೆ ಹಾಕಲಾಗುತ್ತಿದೆ. ಇದನ್ನು ಮುಂಚೆ ಹೇಳಿದ್ದರೆ 50 ಸೀಟು ಗೆಲ್ಲುತ್ತಿರಲಿಲ್ಲ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕಸ ಸಂಗ್ರಹಣೆಗೂ ಸೆಸ್ ವಿಧಿಸಲಾಗುತ್ತಿದೆ. ಬ್ರ್ಯಾಂಡ್ ಬೆಂಗಳೂರು ಅಂತಾರೆ. ಆದರೆ ಎಲ್ಲಿ ನೋಡಿದರೂ ಕಸದ ರಾಶಿ. ಜನರು ಶಾಪ ಹಾಕುತ್ತಿದ್ದಾರೆ. ಹಿಮಾಲಯದಲ್ಲಿ ಶೌಚಾಲಯಕ್ಕೂ ಟ್ಯಾಕ್ಸ್ ಹಾಕಿದ್ದರು. ಹಾಗೇ ರಾಜ್ಯದಲ್ಲಿ ಉಸಿರಾಡುವ ಗಾಳಿಗೆ ಟ್ಯಾಕ್ಸ್ ಹಾಕಬಹುದು ಎಂದಿದ್ದಾರೆ.