ಅಮರಾವತಿ, ಮೇ.02(DaijiworldNews/AK):ಆಂಧ್ರಪ್ರದೇಶದ ಅಮರಾವತಿಯಲ್ಲಿ ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿ 58,000 ಕೋಟಿಗೂ ಅಧಿಕ ಮೌಲ್ಯದ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು.

ಈ ವೇಳೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ತೆಲುಗಿನಲ್ಲಿ “ಕನಕದುರ್ಗಾ ದೇವಿಯೇ ಜಯವಾಗಲಿ” ಎಂದು ಹೇಳುವ ಮೂಲಕ ಭಾಷಣ ಆರಂಭಿಸಿದರು. ಅಮರಾವತಿಯೊಂದಿಗೆ ಪ್ರತಿಯೊಬ್ಬ ಆಂಧ್ರಪ್ರದೇಶದ ವ್ಯಕ್ತಿಯ ಕನಸು ನನಸಾಗುತ್ತದೆ. ದಾಖಲೆಯ ವೇಗದಲ್ಲಿ ಅಮರಾವತಿ ನಿರ್ಮಿಸಲು ನಾವು ಸಹಾಯ ಮಾಡುತ್ತೇವೆ ಎಂದು ಪ್ರಧಾನಿ ಮೋದಿ ಭರವಸೆ ನೀಡಿದರು.
ಅಮರಾವತಿ ಆಂಧ್ರಪ್ರದೇಶವನ್ನು ಆಧುನಿಕ ರಾಜ್ಯವನ್ನಾಗಿ ಪರಿವರ್ತಿಸುವ ಶಕ್ತಿ ಹೊಂದಿದೆ. ಈ ಮೂಲಕ ಒಂದು ದೊಡ್ಡ ಕನಸು ನನಸಾಗಲಿದೆ. ನಾವು ಸುಮಾರು 60 ಸಾವಿರ ಕೋಟಿ ರೂಪಾಯಿಗಳ ಕಾಮಗಾರಿಗಳನ್ನು ಪ್ರಾರಂಭಿಸಿದ್ದೇವೆ. ಅಭಿವೃದ್ಧಿ ಹೊಂದಿದ ಭಾರತಕ್ಕೆ ಇದು ಬಲವಾದ ಅಡಿಪಾಯ. ಅಮರಾವತಿ ಸ್ವರ್ಣಾಂಧ್ರ ದೃಷ್ಟಿಕೋನಕ್ಕೆ ಬಲ ನೀಡುತ್ತದೆ ಎಂದು ಪ್ರಧಾನಿ ಮೋದಿ ಹೇಳಿದರು.