ನವದೆಹಲಿ, ಮೇ. 11 (DaijiworldNews/TA): ಭಾರತ ಮತ್ತು ಪಾಕ್ ಕದನ ವಿರಾಮ ಘೋಷಿಸಿದ್ದರೂ, ಆಪರೇಷನ್ ಸಿಂಧೂರ್ ಮುಂದುವರೆದಿದೆ ಎಂದು ಭಾರತೀಯ ವಾಯುಪಡೆ (ಐಎಎಫ್) ಭಾನುವಾರ ತಿಳಿಸಿದೆ.

ಐಎಎಫ್ ತನ್ನ ಅಧಿಕೃತ ಎಕ್ಸ್ ಪೋಸ್ಟ್ ಹೇಳಿಕೆಯಲ್ಲಿ ಹೇಳಿದೆ. "ಕಾರ್ಯಾಚರಣೆಗಳು ಇನ್ನೂ ನಡೆಯುತ್ತಿರುವುದರಿಂದ, ವಿವರವಾದ ಬ್ರೀಫಿಂಗ್ ಅನ್ನು ಸರಿಯಾದ ಸಮಯದಲ್ಲಿ ಒದಗಿಸಲಾಗುವುದು" ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಆಪರೇಷನ್ ಸಿಂಧೂರ್ ಅಡಿಯಲ್ಲಿ ತನ್ನ ಮಿಷನ್ ಉದ್ದೇಶಗಳನ್ನು ಯಶಸ್ವಿಯಾಗಿ ಕಾರ್ಯಗತಗೊಳಿಸಲಾಗಿದೆ ಎಂದು ಐಎಎಫ್ ದೃಢಪಡಿಸಿತು.