ಕಾರವಾರ, ಮೇ. 14 (DaijiworldNews/AA): ಸರಕು ಹಡಗಿನಲ್ಲಿ ಕಾರವಾರಕ್ಕೆ ಆಗಮಿಸಿದ್ದ ಪಾಕ್ ಪ್ರಜೆಯನ್ನು ನಿಬಂಧನೆ ಮೂಲಕ ಶಿಪ್ ಸಮೇತ ಬುಧವಾರ ವಾಪಸ್ ಕಳುಹಿಸಲಾಗಿದೆ.

ಭಾರತ-ಪಾಕಿಸ್ತಾನದ ಉದ್ವಿಗ್ನತೆಯ ನಡುವೆಯೇ ನಿರ್ಬಂಧವಿದ್ದರೂ ಪಾಕ್ ಪ್ರಜೆಗಳು ಭಾರತಕ್ಕೆ ಬರುತ್ತಿದ್ದಾರೆ. ಇರಾಕ್ ಮೂಲದ ಹಡಗಿನ ಮೂಲಕ ಬಂದ ಪಾಕಿಸ್ತಾನದ ಪ್ರಜೆಯನ್ನು ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಬಂದರಿನಲ್ಲಿ ಬಂಧಿಸಲಾಗಿತ್ತು. ಇದೀಗ ತನಿಖೆ ಬಳಿಕ ಬುಧವಾರ ಶಿಪ್ ಸಮೇತ ಭಾರತದ ಗಡಿ ದಾಟಿಸಲಾಗಿದೆ.
ಇರಾಕ್ನ ಅಲ್ ಜುಬೇರ್ನಿಂದ ಕಾರವಾರ ಬಂದರಿಗೆ ಬಂದಿದ್ದ ಸರಕು ಸಾಗಾಣಿಕೆ ಹಡಗಿನಲ್ಲಿ ಪಾಕ್ನ ಓರ್ವ, ಭಾರತ ಮೂಲದ 15, ಸಿರಿಯಾ -2 ಪ್ರಜೆಗಳು ಶಿಪ್ನಲ್ಲಿ ಇದ್ದರು. ಈ ಶಿಪ್ ಕಾರವಾರ ಬಂದರಿಗೆ ಆಗಮಿಸಿತ್ತು. ಈ ವಿಚಾರ ತಿಳಿದ ಬಂದರು ಇಲಾಖೆ, ಕರಾವಳಿ ಕಾವಲುಪಡೆಗೆ ಮಾಹಿತಿ ನೀಡಿದ್ದು ಶಿಪ್ನಲ್ಲಿ ಇದ್ದ ಪಾಕಿಸ್ತಾನಿ ಪ್ರಜೆಯಿಂದ ಮೊಬೈಲ್ ಇತರೆ ಉಪಕರಣಗಳನ್ನು ವಶಕ್ಕೆ ಪಡೆಯಲಾಗಿತ್ತು.