ಶ್ರೀನಗರ, ಮೇ. 15(DaijiworldNews/AK): ಜಮ್ಮು ಮತ್ತು ಕಾಶ್ಮೀರದ ಪುಲ್ಪಾಮಾದಲ್ಲಿ ಗುಂಡಿನ ಚಕಮಕಿಯಲ್ಲಿ ಭದ್ರತಾ ಪಡೆಗಳು ಮೂವರು ಜೈಶ್ ಉಗ್ರರನ್ನು ಹತ್ಯೆ ಮಾಡಿರುವುದಾಗಿ ಹಿರಿಯ ಸೇನಾಧಿಕಾರಿಗಳು ತಿಳಿಸಿದ್ದಾರೆ.

ಪುಲ್ವಾಮಾ ಜಿಲ್ಲೆಯ ಉಪನಗರವಾದ ಅವಂತಿಪೋರಾದ ನಾಡರ್ ಮತ್ತು ಟ್ರಾಲ್ ಪ್ರದೇಶಗಳಲ್ಲಿ ಇಂದು ಬೆಳಗ್ಗೆ ನಡೆದ ಗುಂಡಿನ ದಾಳಿಯಲ್ಲಿ ಭಾರತೀಯ ಸೇನೆ ಉಗ್ರರನ್ನು ಹೊಡೆದುರುಳಿಸಿದೆ. ಕಳೆದ ಮೂರು ದಿನಗಳಲ್ಲಿ ನಡೆದ 2ನೇ ಎನ್ಕೌಂಟರ್ ಇದಾಗಿದೆ.
ಹತ್ಯೆಗೀಡಾದ ಮೂವರು ಜೈಶ್ ಎ ಮೊಹಮ್ಮದ್ ಸಂಘಟನೆಗೆ ಸೇರಿದವರು ಎಂದು ಉನ್ನತ ಮೂಲಗಳಿಂದ ವರದಿಯಾಗಿದೆ.