ಕೇರಳದಿಂದ ಲಡಾಖ್ ಪಯಣ - ಕ್ಯಾರವಾನ್ನಲ್ಲಿ ಕುಟುಂಬದೊಂದಿಗೆ ಮಹಿಳೆಯ ಪ್ರವಾಸ
Sat, May 17 2025 06:45:19 PM
ತಿರುವನಂತಪುರ, ಮೇ. 17 (DaijiworldNews/TA): ಪಯಣ ಅನ್ನೋದು ಪ್ರತಿಯೊಬ್ಬರ ಕನಸು. ದೇಶ ಸುತ್ತಿ ನೋಡು ಕೋಶ ಓದಿ ನೋಡು ಎಂಬಂತೆ ಹೊಸ ವಿಚಾರದ ಅರ್ಜನೆಯತ್ತ ಎಲ್ಲರೂ ಪ್ರಯಾಣಿಸೋದುಂಟು. ಕೆಲವರು ತಮ್ಮ ಟ್ರಿಪ್ ಅನುಭವಗಳನ್ನು ಹಂಚಿಕೊಳ್ಳುವುದುಂಟು. ಆದರೆ ಕೇರಳದ ಗಟ್ಟಿಗಿತ್ತಿಯ ಕಥೆ ಮಾತ್ರ ಸ್ವಲ್ಪ ವಿಭಿನ್ನ. ಆಕೆಯ ಧೈರ್ಯಕ್ಕೆ ಮೆಚ್ಚಲೇಬೇಕು.
ಕೇರಳದ ಮಹಿಳೆಯೊಬ್ಬರು ಕ್ಯಾರವ್ಯಾನ್ ಓಡಿಸುತ್ತಾ ತನ್ನ ಕುಟುಂಬದೊಂದಿಗೆ ಕೇರಳದಿಂದ ಲಡಾಖ್ ನತ್ತ ಪ್ರಯಾಣ ಬೆಳೆಸಿದ್ದಾರೆ. ಈ ಧೈರ್ಯವಂತ ಮಹಿಳೆ ತಮ್ಮ ಕನಸಿನ ಪ್ರಯಾಣದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಬಳಕೆದಾರರು ಇದಕ್ಕೆ ನಾನಾ ರೀತಿಯ ಕಾಮೆಂಟ್ ಗಳನ್ನು ಮಾಡುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪುಥೆಟ್ಟು ಟ್ರಾವೆಲ್ ವ್ಲಾಗ್ ನಲ್ಲಿ ಕ್ಯಾರವ್ಯಾನ್ ಓಡಿಸುತ್ತಿರುವ ಕೇರಳದ ಮಹಿಳೆಯೂ ತನ್ನ ಕುಟುಂಬದ ಜೊತೆಗೆ ಕೇರಳದಿಂದ ಲಡಾಖ್ ವರೆಗಿನ ಪ್ರಯಾಣದ ಬಗ್ಗೆ ಹಂಚಿಕೊಂಡಿದ್ದಾರೆ. ನಾವು ಕೇರಳದಿಂದ ಲಡಾಖ್ ಗೆ ನಮ್ಮ ಕನಸಿನ ಪ್ರಯಾಣ ಆರಂಭಿಸಿದ್ದೇವೆ. ಮೂರು ವರ್ಷದ ಮಗು ಸೇರಿದಂತೆ ಏಳು ಜನರು ಈ ಕ್ಯಾರವ್ಯಾನ್ ನಲ್ಲಿ ಪ್ರಯಾಣಿಸುತ್ತಿದ್ದೇವೆ. ಈ ಟ್ರಿಪ್ ನಲ್ಲಿ ಸರಿಸುಮಾರು 18 ರಾಜ್ಯಗಳು ಒಳಗೊಂಡಿದೆ ಎಂಬುವುದಾಗಿ ಮಹಿಳೆಯೊಬ್ಬರು ವಿಡಿಯೋದಲ್ಲಿ ಹೇಳುವುದನ್ನು ಕಾಣಬಹುದು.
53 ಮಿಲಿಯನ್ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಹೊಂದಿರುವ ಅವರ ಒಂದು ವೀಡಿಯೊ ಅವರ ಕ್ಯಾರವಾನ್ ಜೀವನದ ಹತ್ತಿರದ ನೋಟವನ್ನು ನೀಡುತ್ತದೆ. ಪ್ರಮುಖ ಸೌಲಭ್ಯಗಳೊಂದಿಗೆ ಸಜ್ಜುಗೊಂಡಿರುವ ಅವರ ಕ್ಯಾರವಾನ್ ಒಂದು ಅದ್ಭುತಕ್ಕಿಂತ ಕಡಿಮೆಯಿಲ್ಲ. ಒಳಾಂಗಣವು ವಿಶ್ರಾಂತಿಗಾಗಿ ಸಂಘಟಿತ ಬಂಕ್ ಹಾಸಿಗೆಗಳನ್ನು ಹೊಂದಿದೆ. ಅಡುಗೆಮನೆಯು ಉತ್ತಮವಾಗಿ ನಿರ್ವಹಿಸಲ್ಪಟ್ಟಿದೆ, ಕಪಾಟುಗಳು, ಚರಣಿಗೆಗಳು, ಡ್ರಾಯರ್ಗಳು ಮತ್ತು ಬಹು ವಿಶಾಲವಾದ ಪ್ರದೇಶಗಳನ್ನು ಒಳಗೊಂಡಿದೆ. ಬಟ್ಟೆಗಳನ್ನು ಸಂಗ್ರಹಿಸಲು ಪ್ರತ್ಯೇಕ ವಿಭಾಗ ಮತ್ತು ಕಾಂಪ್ಯಾಕ್ಟ್ ಫ್ರಿಜ್ ಕೂಡ ಇದೆ. ಆರಾಮದಾಯಕ ಕುರ್ಚಿಗಳೊಂದಿಗೆ ಒದಗಿಸಲಾದ ಊಟದ ಸ್ಥಳದಲ್ಲಿ ಬೇಯಿಸಿದ ಊಟವನ್ನು ಆನಂದಿಸುತ್ತಿರುವುದನ್ನು ಕ್ಲಿಪ್ನಲ್ಲಿ ಕಾಣಬಹುದು.