ಬೆಂಗಳೂರು, ಮೇ. 18 (DaijiworldNews/AA): ಆಪರೇಷನ್ ಸಿಂಧೂರ ನಡೆದ ನಂತರ ಕೇಂದ್ರ ಸರ್ಕಾರ ಯಾವುದೇ ಸರಿಯಾದ ಮಾಹಿತಿ ನೀಡುತ್ತಿಲ್ಲ. ಕೇಂದ್ರ ಸರ್ಕಾರ ಸಂಸತ್ ಅಧಿವೇಶನ ಕರೆದು ಚರ್ಚೆ ಮಾಡಲಿ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ವ ಪಕ್ಷ ನಿಯೋಗದಲ್ಲಿ ಎಐಸಿಸಿ ಕೊಟ್ಟ ಹೆಸರಿನ ಬದಲು ಶಶಿ ತರೂರ್ ಹೆಸರು ಸೇರಿಸಿರುವ ವಿಚಾರ ಅದನ್ನು ನಾವು ಬೆಂಬಲಿಸುತ್ತೇವೆ ಅಂತ ಹೇಳಿದ್ದೇವೆ. ಎರಡು ಬಾರಿ ಸರ್ವಪಕ್ಷ ಸಭೆ ಕರೆದು ಪ್ರಧಾನಿ ಯಾಕೆ ಹೋಗಿಲ್ಲ? ಪಾರ್ಲಿಮೆಂಟ್ ಯಾಕೆ ಕರೆಯುತ್ತಿಲ್ಲ? ನಿನ್ನೆ ಪಾಕಿಸ್ತಾನದ ಪ್ರಧಾನಿ ಭಾರತದ ಮುಖ್ಯಸ್ಥರು ಕದನ ವಿರಾಮ ಕೇಳಿದ್ರು ಅಂತಾ ಹೇಳಿದ್ದಾರೆ. ಪಾರ್ಲಿಮೆಂಟಿನಲ್ಲಿ ನಾವು ಜಯಭೇರಿ ಗಳಿಸಿದ್ದೇವೆ ಅಂತಾ ಘೋಷಣೆ ಮಾಡುತ್ತಾರೆ. ಇದರ ಬಗ್ಗೆ ಪಾರ್ಲಿಮೆಂಟಿನಲ್ಲಿ ಹೇಳಲು ಯಾಕೆ ಹೆದರಿಕೆ? ಈಗಲೂ ನಮ್ಮ ಸೈನಿಕರು ಹಾಗೂ ಕೇಂದ್ರ ಸರ್ಕಾರಕ್ಕೆ ಬೆಂಬಲ ನೀಡುತ್ತೇವೆ ಎಂದು ಹೇಳಿದರು.
ಪಹಲ್ಗಾಮ್ಗೆ ಮೋದಿಯವರು ಹೋಗಿದ್ರಾ? ಎಲ್ಲೆಲ್ಲಿ ಅವರಿಗೆ ಕೆಟ್ಟ ಹೆಸರು ಬರುತ್ತದೆ ಅಲ್ಲಿಗೆ ಹೋಗೋದಿಲ್ಲ. ಮಣಿಪುರಕ್ಕೆ ಹೋಗಿದ್ರಾ? ಇಲ್ಲಿವರೆಗೆ ಸಂತಾಪವಾದರೂ ಹೇಳಿದ್ರಾ? ಇಮೇಜ್ ಡ್ಯಾಮೇಜ್ ಆಗೋ ಕಡೆ ಅವರು ಹೊಗಲ್ಲ. ಆದಮ್ಪುರ್ಗೆ ಹೋಗಿದ್ದಾರೆ ಮೊನ್ನೆ. ಎನ್ಡಿಎ ಚೀಫ್ ಮಿನಿಸ್ಟರ್ಗಳಿಗೆ ಮಾತ್ರ ಬ್ರೀಫಿಂಗ್ ಎನ್ನುತ್ತಾರೆ. ಪಂಜಾಬ್, ಜಮ್ಮು ಕಾಶ್ಮೀರ, ಹಿಮಾಚಲ ಪ್ರದೇಶ ಸಿಎಂ, ಯಾವ ಪಕ್ಷದವರು? ಇವರಿಗೆ ರಾಷ್ಟ್ರೀಯ ಭದ್ರತೆ ಇವೆಲ್ಲ ಮುಖ್ಯ ಅಲ್ಲ, ರಾಜಕೀಯವೇ ಮುಖ್ಯನಾ? ಇದಕ್ಕೆಲ್ಲಾ ಉತ್ತರ ಕೊಡಿ. ಪಾರ್ಲಿಮೆಂಟ್ ಕರೀರಿ, ಪ್ರೆಸ್ಮೀಟ್ ಮಾಡಲಿ ಇದಕ್ಕೆ ಸಾಮರ್ಥ್ಯ ಇಲ್ಲ ಎಂದು ವಾಗ್ದಾಳಿ ನಡೆಸಿದರು.