ಕಾಸರಗೋಡು, ಜೂ21(Daijiworld News/SS): ಕೊಚ್ಚಿಯ ಶಾಪಿಂಗ್ ಮಾಲ್ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಐಸಿಸ್ ದಾಳಿ ನಡೆಸುವ ಸಾಧ್ಯತೆಯ ಬಗ್ಗೆ ಗುಪ್ತಚರ ಇಲಾಖೆ ವರದಿ ನೀಡಿದೆ.
ಐಸಿಸ್ ತನ್ನ ನೆಲೆಯನ್ನು ಭಾರತೀಯ ಸಮುದ್ರ ತೀರ ಪ್ರದೇಶಗಳತ್ತ ಕೇಂದ್ರೀಕರಿಸಿ ವಿಧ್ವಂಸಕ ಕೃತ್ಯ ನಡೆಸುವ ಯೋಜನೆ ಹಾಕಿಕೊಂಡಿರುವ ಮಾಹಿತಿ ಲಭಿಸಿದೆ. ಕೊಚ್ಚಿಯ ಶಾಪಿಂಗ್ ಮಾಲ್ಗಳಲ್ಲದೇ ಪ್ರಮುಖ ಕೇಂದ್ರಗಳಲ್ಲಿ ದಾಳಿ ನಡೆಸಲು ಐಸಿಸ್ ಸಂಚು ಹೂಡಿದ್ದು, ಈ ಕುರಿತಾದ ಮಾಹಿತಿಯನ್ನು ರಾಜ್ಯ ಪೊಲೀಸರಿಗೆ ಹಸ್ತಾಂತರಿಸಲಾಗಿದೆ ಎಂದು ತಿಳಿದುಬಂದಿದೆ.
ಐಸಿಸ್ ಸೈಬರ್ ಸೆಲ್ಗಳು ಕೇರಳದಲ್ಲಿ ಈಗಲೂ ಸಕ್ರಿಯವಾಗಿದ್ದು, ನಿರಂತರ ಚಟುವಟಿಕೆಗಳನ್ನು ನಡೆಸುತ್ತಿವೆ. ಉಗ್ರ ಕೃತ್ಯಗಳಿಗೆ ತೆರಳಿದ ಹೆಚ್ಚಿನವರೂ ಕೇರಳದವರಾಗಿದ್ದು, ಅವರೆಲ್ಲರೂ ವಿದೇಶಗಳಲ್ಲಿ ನೆಲೆಸಿದ್ದಾರೆ. ಯಾವ ಕ್ಷಣಕ್ಕೂ ಅವರು ಮರಳಿ ಬಂದು ಕೇರಳದಲ್ಲಿ ಹಿಂಸಾತ್ಮಕ ಕೃತ್ಯ ನಡೆಸುವ ಸಾಧ್ಯತೆಯೂ ಇದೆ ಎಂದು ತನಿಖೆಯಿಂದ ತಿಳಿದುಬಂದಿದೆ.