ಶಿಮ್ಲಾ, ಜೂ. 27 (DaijiworldNews/AA): ಹಿಮಾಚಲ ಪ್ರದೇಶದ ಐದು ಸ್ಥಳಗಳಲ್ಲಿ ಸಂಭವಿಸಿದ ಮೇಘಸ್ಫೋಟದಿಂದ ಉಂಟಾದ ಪ್ರವಾಹದಲ್ಲಿ ಇದುವರೆಗೆ 7 ಮಂದಿ ಸಾವನ್ನಪ್ಪಿದ್ದು, ಇನ್ನೂ ಕೆಲವರು ಕಾಣೆಯಾಗಿರುವುದಾಗಿ ತಿಳಿದುಬಂದಿದೆ.

ಈ ಪ್ರವಾಹದಿಂದಾಗಿ ಧರ್ಮಶಾಲಾ ಮತ್ತು ಕುಲ್ಲು ಪ್ರದೇಶದ ಆರು ಮಂದಿ ಕಾಣೆಯಾಗಿದ್ದಾರೆ. ಈಗಾಗಲೇ ಮನುನಿ ಖಾದ್ನಲ್ಲಿ ಕೊಚ್ಚಿ ಹೋಗಿದ್ದ ಓರ್ವ ಕಾರ್ಮಿಕನ ಮೃತದೇಹವನ್ನು ಹೊರತೆಗೆಯಲಾಗಿದ್ದು, ಇನ್ನುಳಿದವರಿಗಾಗಿ ಎನ್ಡಿಆರ್ಎಫ್, ಎಸ್ಡಿಆರ್ಎಫ್, ಪೊಲೀಸ್ ತಂಡಗಳು ಹಾಗೂ ಸ್ಥಳೀಯರು ಶೋಧಕಾರ್ಯ ನಡೆಸುತ್ತಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ಹಿಮಾಚಲದ ಜಿಲ್ಲಾಧಿಕಾರಿ ಕಾಂಗ್ರಾ ಶಿಲ್ಪಿ ಬೆಕ್ತಾ ಅವರು, ಸದ್ಯ ಪ್ರವಾಹದಲ್ಲಿ ಸಿಲುಕಿಕೊಂಡಿರುವ ಕಾರ್ಮಿಕರನ್ನು ಪತ್ತೆಹಚ್ಚುವುದು ನಮ್ಮ ಮುಖ್ಯ ಗುರಿಯಾಗಿದೆ. ಹೀಗಾಗಿ ಸ್ಥಳದಲ್ಲಿ ಹಿಮಾಚಲ ಪ್ರದೇಶ ಪೊಲೀಸ್, ಎಸ್ಡಿಆರ್ಎಫ್ ಮತ್ತು ಎನ್ಡಿಆರ್ಎಫ್ನ 50 ಸದಸ್ಯರ ತಂಡ ಸ್ಥಳದಲ್ಲಿದೆ. ಗೃಹರಕ್ಷಕ ದಳದ ತಂಡವನ್ನು ನಿಯೋಜಿಸಿದ್ದೇವೆ ಎಂದಿದ್ದಾರೆ.