ಬಳ್ಳಾರಿ, ಜೂ. 29 (DaijiworldNews/AA): ಬಿಜೆಪಿ ಬಿಟ್ಟು ಬೇರೆ ಯಾವ ಪಕ್ಷಕ್ಕೂ ಹೋಗಲ್ಲ, ಬಿಜೆಪಿಗೆ ಹೋಗೇ ಹೋಗ್ತೇನೆ ಎಂದು ಬಳ್ಳಾರಿಯಲ್ಲಿ ಮಾಜಿ ಡಿಸಿಎಂ ಕೆ.ಎಸ್ ಈಶ್ವರಪ್ಪ ತಿಳಿಸಿದರು.

ಶನಿವಾರ ನಡೆದ ಕುರುಬ ಸಮುದಾಯದ ಬಿಜೆಪಿ ನಾಯಕರ ಸಭೆಯಲ್ಲಿನ ಒತ್ತಾಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, "ನನ್ನ ಜೀವ ಇರೋದೇ ಬಿಜೆಪಿಯಲ್ಲಿ. ನೊಡೋಣ, ಕೆಲವರು ಹಿರಿಯರಲ್ಲಿ ಮಾತಮಾಡಬೇಕು. ಕುಳಿತು ಚರ್ಚೆ ಮಾಡೋಣ" ಎಂದು ಹೇಳಿದರು.
"ಬೇರೆ ಪಕ್ಷದಿಂದ ಆಫರ್ ಬಂದಿತ್ತು. ಸಿದ್ದರಾಮಯ್ಯ ಸಚಿವ ಸಂಪುಟದ ಸಚಿವರು ಕರೆದಿದ್ರು. ನಿಮಗೆ, ನಿಮ್ಮ ಮಗನಿಗೆ ಸ್ಥಾನ ಮಾನ ಕೊಡ್ತೇವೆ ಎಂದ್ರು. ಅಖಿಲೇಶ್ ಯಾದವ್ ಕೂಡ ಕರೆದಿದ್ರು. ನಾನು ಹಿಂದುತ್ವ, ಸತ್ರೂ ಹಿಂದುತ್ವ. ಬಿಜೆಪಿ ಇವತ್ತು ನಿನ್ನೆಯ ಪಕ್ಷ ಅಲ್ಲ. ಯಡಿಯೂರಪ್ಪ, ಅನಂತ್ ಕುಮಾರ್ ನಾನು ಸೇರಿ ಹಲವು ಹಿರಿಯರು ರಾಜ್ಯದಲ್ಲಿ ಪಕ್ಷ ಕಟ್ಟಿದ್ವಿ. ಅದಕ್ಕೂ ಮುಂಚೆ ಹಲವರು ರಕ್ತ ಸುರಿಸಿ ಪಕ್ಷ ಕಟ್ಟಿದ್ದಾರೆ. ಗ್ರಾಮ ಪಂಚಾಯ್ತಿ, ಕಾರ್ಪೋರೇಷನ್ ಎಲೆಕ್ಷನ್ ಮಾಡೋದಕ್ಕೂ ಜನ ಇರಲಿಲ್ಲ. ಅಂತ ಸಂದರ್ಭದಲ್ಲಿ ಪಕ್ಷ ಕಟ್ಟಿದ್ದೇವೆ" ಎಂದರು.
"ಪಕ್ಷಕ್ಕೆ ನನ್ನನ್ನು ಯಾರೋ ಕರೀಬೇಕು, ಕರೀಬಾರದು ಅಂತಾ ಅಲ್ಲ ಹಿರಿಯರು ಚರ್ಚೆ ಮಾಡ್ತಾರೆ. ನನ್ನ ಪಕ್ಷಕ್ಕೆ ಕರೆದುಕೊಳ್ಳುವಲ್ಲಿ ಬಿಜೆಪಿ ಯಾಕೆ ಎಚ್ಚೆತ್ತುಕೊಂಡಿಲ್ಲ ಅಂತಾ ನಾನು ಹೇಳಲ್ಲ ಎಂದ ಅವರು ಕುಟುಂಬ ರಾಜಕಾರಣದ ಬಗ್ಗೆ ಮಾತನಾಡಿದ್ದು ಮುಗಿತು. ಅದರ ಬಗ್ಗೆ ನಾನು ಇನ್ನು ಮೇಲೆ ಮಾತಾಡೋದಿಲ್ಲ" ಎಂದರು.