ನವದೆಹಲಿ, ಜು. 02 (DaijiworldNews/AA): ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ)ನ ನೂತನ ಎಕ್ಸಿಕ್ಯೂಟಿವ್ ಡೈರೆಕ್ಟರ್ ಆಗಿ ಕೇಶವನ್ ರಾಮಚಂದ್ರನ್ ಅವರನ್ನು ನೇಮಕ ಮಾಡಲಾಗಿದೆ.

ಆರ್ಬಿಐನಲ್ಲೇ ಪ್ರಧಾನ ಮುಖ್ಯ ಜನರಲ್ ಮ್ಯಾನೇಜರ್ ಆಗಿದ್ದ ಕೇಶವನ್ ರಾಮಚಂದ್ರನ್ ಅವರನ್ನು ಕಾರ್ಯನಿರ್ವಾಹಕ ನಿರ್ದೇಶಕರಾಗಿ ನೇಮಕ ಮಾಡಲಾಗಿದೆ. ಕೇಶವನ್ ರಾಮಚಂದ್ರನ್ ಅವರು ಜುಲೈ 1ರಿಂದ ಅಧಿಕಾರ ಪಡೆಸಿದ್ದಾರೆ. ಆರ್ಬಿಐನ ನಿಯಮಾವಳಿ ನೋಡಿಕೊಳ್ಳುವ ರೆಗ್ಯುಲೇಶನ್ ವಿಭಾಗದ ಜವಾಬ್ದಾರಿಯನ್ನು ಅವರು ವಹಿಸಿಕೊಳ್ಳಲಿದ್ದಾರೆ.
ಕೇಶವನ್ ರಾಮಚಂದ್ರನ್ ಅವರು ೩೦ ವರ್ಷಗಳ ಅನುಭವ ಹೊಂದಿದ್ದಾರೆ. ಅವರು ಬ್ಯಾಂಕಿಂಗ್ ಮತ್ತು ಹಣಕಾಸು ವಿಷಯಗಳಲ್ಲಿ ವಿವಿಧ ಉನ್ನತ ವ್ಯಾಸಂಗ ಮತ್ತು ಸರ್ಟಿಫಿಕೇಟ್ಗಳನ್ನು ಹೊಂದಿದ್ದಾರೆ.