ಶ್ರೀನಗರ, ಜು. 02 (DaijiworldNews/AK): ಪವಿತ್ರ ಅಮರನಾಥ ಯಾತ್ರೆಗೆ ಇಂದು ಬಿಗಿಭದ್ರತೆಯೊಂದಿಗೆ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಚಾಲನೆ ನೀಡಿದರು.

ಅಧಿಕೃತವಾಗಿ ನಾಳೆಯಿಂದ ಆರಂಭವಾಗಲಿದ್ದು, ಇಂದು ಜಮ್ಮುವಿನ ಭಗವತಿ ನಗರದಲ್ಲಿ 5,880 ಭಕ್ತರಿದ್ದ ಮೊದಲ ಶಿಬಿರಕ್ಕೆ ಧ್ವಜ ಹಾರಿಸುವ ಮೂಲಕ ಚಾಲನೆ ನೀಡಲಾಯಿತು.
ಜು.3ರಂದು ಬಾಲ್ಟಾಲ್ ಮತ್ತು ಪಹಲ್ಗಾಮ್ ಮಾರ್ಗಗಳಿಂದ ಯಾತ್ರೆ ಅಧಿಕೃತವಾಗಿ ಪ್ರಾರಂಭವಾಗಲಿದ್ದು, ಆ.7ರವರೆಗೆ 38 ದಿನಗಳ ಕಾಲ ಅಮರನಾಥ ಯಾತ್ರೆ ನಡೆಯಲಿದೆ. ಈ ಹಿನ್ನೆಲೆ ಕಥುವಾದ ಲಖನ್ಪುರದಿಂದ ಪವಿತ್ರ ಗುಹೆಯವರೆಗೆ ಸುಮಾರು 1 ಲಕ್ಷ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಜಮ್ಮು-ಶ್ರೀನಗರ ಹೆದ್ದಾರಿ ಸಾವಿರಾರು ಯಾತ್ರಿಕರಿಗೆ ಪ್ರಮುಖ ಮಾರ್ಗಗಳಲ್ಲಿ ಒಂದಾಗಿದೆ. ಹೀಗಾಗಿ ಸಿಆರ್ಪಿಎಫ್ ಅದರ ಮೇಲೆ ಕಣ್ಗಾವಲು ಹೆಚ್ಚಿಸಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆ-9 ಶ್ವಾನ ದಳಗಳನ್ನು ಅದರ ಸಿಬ್ಬಂದಿಯೊಂದಿಗೆ ನಿಯೋಜಿಸಲಾಗಿದೆ.