ಜೈಪುರ, ಜು. 06 (DaijiworldNews/AK): ಪೊಲೀಸ್ ಸಬ್ ಇನ್ಸ್ಪೆಕ್ಟರ್ ಅಧಿಕಾರಿ ಆಗಬೇಕು ಅಂದ್ರೆ ವರ್ಷಾನುಗಟ್ಟಲೆ ಓದಿ ತರಬೇತಿ ಪಡೆದು ಸಾಧನೆ ಮಾಡ್ತಾರೆ. ಆದ್ರೆ ಇಲ್ಲೊಬ್ಬಳು ಪರೀಕ್ಷೆಯಲ್ಲಿ ಫೇಲ್ ಆಗಿದ್ದರೂ 2 ವರ್ಷ ಅಧಿಕಾರಿಯಾಗಿ ಕೆಲಸ ಮಾಡಿದ್ದಾಳೆ. ಪೊಲೀಸ್ ಸಬ್-ಇನ್ಸ್ಪೆಕ್ಟರ್ ಅಂತ ಹೇಳಿಕೊಂಡು ರಾಜಸ್ಥಾನ ಪೊಲೀಸ್ ಅಕಾಡೆಮಿ ಟ್ರೈನಿಂಗ್ಗೆ ಹಾಜರಾಗಿದ್ದಾಳೆ. ಹಿರಿಯ ಅಧಿಕಾರಿಗಳೊಂದಿಗೆ ಫೋಟೋ ತೆಗೆಸಿಕೊಂಡು ತಾನು ಪೊಲೀಸ್ ಅಧಿಕಾರಿ ಅಂತಲೇ ಬಿಲ್ಡಪ್ ಕೊಡ್ತಿದ್ದ ಮಹಿಳೆ ಈಗ ಅಂದರ್ ಆಗಿದ್ದಾಳೆ.

ಬಂಧಿತ ಆರೋಪಿ ಮಹಿಳೆಯನ್ನ ಮೋನಾ ಬುಗಾಲಿಯಾ ಅಲಿಯಾಸ್ ಮೂಲಿ ದೇವಿ ಎಂದು ಗುರುತಿಸಲಾಗಿದೆ. 2023ರಲ್ಲಿ ಈಕೆ ವಿರುದ್ಧ ದೂರು ದಾಖಲಾದ ಬಳಿಕ ಪರಾರಿಯಾಗಿದ್ದಳು. ಆದ್ರೆ ಈ ವಾರದ ಆರಂಭದಲ್ಲಿ ರಾಜಸ್ಥಾನದ ಸಿಕಾರ್ ಜಿಲ್ಲೆಯಲ್ಲಿ ಆಕೆಯನ್ನ ಬಂಧಿಸಲಾಗಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಪೊಲೀಸ್ ಮೂಲಗಳ ಪ್ರಕಾರ, ಮೋನಾ ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ಅರ್ಹತೆಯನ್ನೇ ಗಳಿಸಿಲ್ಲ. ಆದರೂ ರಾಜಸ್ಥಾನ ಪೊಲೀಸ್ ಅಕಾಡೆಮಿ ಪ್ರವೇಶಿಸಿ ತರಬೇತಿ ಪಡೆದುಕೊಂಡಿದ್ದಾಳೆ. ಆಕೆಯನ್ನು ಅರೆಸ್ಟ್ ಮಾಡಿದ ಬಳಿಕ ತಾನು ವಾಸವಿದ್ದ ಬಾಡಿಗೆ ಮನೆಯನ್ನ ಶೋಧಿಸಿದಾಗ ಹಲವು ಮಹತ್ವದ ದಾಖಲೆಗಳು ಪತ್ತೆಯಾಗಿವೆ.