ಚೆನ್ನೈ, ಆ. 03 (DaijiworldNews/AK): ನೂರಾರು ಸಿನಿಮಾಗಳಲ್ಲಿ ಅಭಿನಯಿಸಿ, ಹಾಸ್ಯ ಪಾತ್ರಗಳ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದ ನಟ ಮದನ್ ಬಾಬ್ ಅವರು ನಿಧನರಾಗಿದ್ದಾರೆ.

ತಮಿಳು ಚಿತ್ರರಂಗದಲ್ಲಿ ಖ್ಯಾತರಾಗಿದ್ದ ಮದನ್ ಬಾಬ್ ಅವರಿಗೆ 71 ವರ್ಷ ವಯಸ್ಸಾಗಿತ್ತು. ಕಳೆದ ಕೆಲವು ವರ್ಷಗಳಿಂದ ಕ್ಯಾನ್ಸರ್ನಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿ ಆಗದೇ ಕೊನೆಯುಸಿರು ಎಳೆದಿದ್ದಾರೆ.
ಚೆನ್ನೈನಲ್ಲಿ ಶನಿವಾರ (ಆಗಸ್ಟ್ 2) ಸಂಜೆ ಅವರು ನಿಧನರಾಗಿದ್ದು, ಅನೇಕ ಸೆಲೆಬ್ರಿಟಿಗಳು ಕಂಬಿನಿ ಮಿಡಿದಿದ್ದಾರೆ. ಮದನ್ ಬಾಬ್ ಅವರ ಮೂಲ ಹೆಸರು ಎಸ್. ಕೃಷ್ಣಮೂರ್ತಿ. ಚಿತ್ರರಂಗದಲ್ಲಿ ಅವರು ಮದನ್ ಬಾಬ್ ಎಂಬ ಹೆಸರಿನಿಂದ ಗುರುತಿಸಿಕೊಂಡಿದ್ದರು.
ಮದನ್ ಬಾಬ್ ಅವರ ನಿಧನದಿಂದ ಚಿತ್ರರಂಗದಲ್ಲಿ ಶೋಕ ಆವರಿಸಿದೆ. ರಜನಿಕಾಂತ್, ಕಮಲ್ ಹಾಸನ್, ಅಜಿತ್ ಕುಮಾರ್, ಸೂರ್ಯ, ವಿಜಯ್ ಮುಂತಾದ ಸ್ಟಾರ್ ಕಲಾವಿದರ ಸಿಮಾಗಳಲ್ಲಿ ಮದನ್ ಬಾಬ್ ನಟಿಸಿದ್ದರು.