ಜೈಪುರ, ಆ. 10(DaijiworldNews/TA): ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಶುಕ್ರವಾರ ಪಕ್ಷದ ವಕ್ತಾರ ಕೃಷ್ಣ ಕುಮಾರ್ ಜಾನು ಅವರನ್ನು 6 ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟಿಸಿದೆ.

ಜಮ್ಮು ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯ ಪಾಲ್ ಮಲಿಕ್ ಮತ್ತು ಮಾಜಿ ಉಪ ರಾಷ್ಟ್ರಪತಿ ಜಗದೀಪ್ ಧಂಖರ್ ಅವರನ್ನು ಪಕ್ಷ ನಡೆಸಿಕೊಂಡ ರೀತಿಯನ್ನು ಸಾರ್ವಜನಿಕವಾಗಿ ಟೀಕಿಸಿದ್ದಕ್ಕಾಗಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ರಾಜಸ್ಥಾನ ಘಟಕವು ರಾಜ್ಯ ವಕ್ತಾರ ಕೃಷ್ಣ ಕುಮಾರ್ ಜಾನು ಅವರನ್ನು ಆರು ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟಿಸಿದೆ.
ಪಕ್ಷದ ಅಧಿಕಾರಿಗಳ ಪ್ರಕಾರ, ಜೂನ್ನಲ್ಲಿ ಆರಂಭವಾದ ಶಿಸ್ತು ಪ್ರಕ್ರಿಯೆಯ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ಬಿಜೆಪಿ ರಾಜ್ಯ ಶಿಸ್ತು ಸಮಿತಿ ಅಧ್ಯಕ್ಷ ಓಂಕಾರ್ ಸಿಂಗ್ ಲಖವತ್ ಅವರು, ಜೂನ್ 20 ರಂದು ಕೃಷ್ಣ ಕುಮಾರ್ ಜಾನು ಅವರ ಹೇಳಿಕೆಗಳಿಗೆ ವಿವರಣೆ ಕೋರಿ ಶೋಕಾಸ್ ನೋಟಿಸ್ ನೀಡಲಾಗಿತ್ತು ಎನ್ನಲಾಗಿದೆ.
ಜನುರು ಜೂನ್ನಲ್ಲಿ ಹರ್ಷಿನಿ ಕುಲ್ಹಾರಿ ಅವರನ್ನು ಜುನ್ಜುನು ಜಿಲ್ಲಾ ಬಿಜೆಪಿ ಅಧ್ಯಕ್ಷರನ್ನಾಗಿ ನೇಮಿಸಿದ ಕ್ರಮವನ್ನು ಸಾರ್ವಜನಿಕವಾಗಿ ವಿರೋಧಿಸಿದ್ದರು. ಈ ಕುರಿತು ನೀಡಿದ ಟೀಕೆ ಕೂಡಾ ಅವರ ವಿರುದ್ಧ ಕ್ರಮ ಕೈಗೊಳ್ಳಲು ಕಾರಣವಾಯಿತೆಂದು ಪಕ್ಷದ ಮೂಲಗಳು ತಿಳಿಸಿವೆ. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಸತ್ಯಪಾಲ್ ಮಲಿಕ್ ಈ ವಾರದ ಆರಂಭದಲ್ಲಿ ತಮ್ಮ 79 ನೇ ವಯಸ್ಸಿನಲ್ಲಿ ನಿಧನರಾದರು.