ರಾಜಸ್ಥಾನ, ಆ. 12 (DaijiworldNews/AK): ಎರಡೆರಡು ಬಾರಿ ಯುಪಿಎಸ್ ಸಿ ಪರೀಕ್ಷೆಯಲ್ಲಿ ಯಶಸ್ವಿಯಾಗಿರುವ ಗಗನ್ ಮೀನಾ ಅವರ ಯಶಸ್ಸಿನ ಹಾದಿಯ ಬಗ್ಗೆ ತಿಳಿಯೋಣ .

ಒಮ್ಮೆ UPSC ಪರೀಕ್ಷೆಯಲ್ಲಿ ತೇರ್ಗಡೆಯಾಗಲು ವರ್ಷಗಳೇ ಬೇಕು. ಆದರೆ ರಾಜಸ್ಥಾನದ ಗಗನ್ ಮೀನಾ ಎರಡು ವರ್ಷಗಳಲ್ಲಿ ಎರಡು ಬಾರಿ UPSC ತೇರ್ಗಡೆಯಾಗುವ ಮೂಲಕ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ಪ್ರಥಮ ಬಾರಿಗೆ ಐಪಿಎಸ್ ಮತ್ತು ಎರಡನೇ ಬಾರಿ ಐಎಎಸ್ ಹುದ್ದೆಗೆ ಆಯ್ಕೆಯಾದರು.
ಗಗನ್ ಮೀನಾ ರಾಜಸ್ಥಾನದ ಸವಾಯಿ ಮಾಧೋಪುರ್ ಜಿಲ್ಲೆಯ ಮೀನಾ ಬರೋಡಾ ಗ್ರಾಮದ ನಿವಾಸಿ. ಅವರು ಇತ್ತೀಚೆಗೆ ಬಿಡುಗಡೆಯಾದ UPSC ನಾಗರಿಕ ಸೇವೆಗಳ ಫಲಿತಾಂಶ 2022 ರಲ್ಲಿ 120 ನೇ ರ್ಯಾಂಕ್ ಗಳಿಸಿದ್ದಾರೆ. ಅವರಿಗೆ ಐಎಎಸ್ ಹುದ್ದೆಯನ್ನು ನೀಡಲಾಗಿದೆ. ಗಗನ್ ತಂದೆಗೆ ತನ್ನ ಮಗ ಕಲೆಕ್ಟರ್ ಆಗಬೇಕು ಎಂಬ ಕನಸಿತ್ತು. ಇಂದು ಗಗನ್ ತಂದೆಯ ಕನಸನ್ನು ನನಸಾಗಿಸಿದ್ದಾರೆ. ಅಖಿಲ ಭಾರತ 120 ನೇ ರ್ಯಾಂಕ್ ಪಡೆದಿದ್ದಾರೆ
ಗಗನ್ ಯಾವಾಗಲೂ ಅಧ್ಯಯನದಲ್ಲಿ ಚುರುಕಾಗಿದ್ದರು. ಅವರು ಐಐಟಿ ಬಿಎಚ್ ಯುನಿಂದ ಸಿವಿಲ್ ಎಂಜಿನಿಯರಿಂಗ್ ನಲ್ಲಿ ಬಿಟೆಕ್ ಮಾಡಿದ್ದಾರೆ. ಇದಾದ ನಂತರ UPSC ಗೆ ತಯಾರಿ ಆರಂಭಿಸಿದರು. ಈ ಹಿಂದೆ ಗಗನ್ ಕೂಡ ಐಪಿಎಸ್ ಹುದ್ದೆಗೆ ಆಯ್ಕೆಯಾಗಿದ್ದಾರೆ.
2022 ರಲ್ಲಿ, ಅವರಿಗೆ ಹರಿಯಾಣ ಕೇಡರ್ ಅನ್ನು ನೀಡಲಾಯಿತು. ಆದರೆ ಅವರು ಐಎಎಸ್ ಆಗಬೇಕೆಂದು ಬಯಸಿದ್ದರಿಂದ ವಿಶೇಷ ರಜೆ ಪಡೆದು ಯುಪಿಎಸ್ ಸಿ ಪರೀಕ್ಷಾ ತಯಾರಿ ಮುಂದುವರಿಸಿದ್ದರು. ಮತ್ತೆ ಪ್ರಯತ್ನ ಮಾಡುವ ಮೂಲಕ ಐಎಎಸ್ ಆಗುವ ಕನಸನ್ನು ನನಸು ಮಾಡಿಕೊಂಡರು.