ನವದೆಹಲಿ, 27 (DaijiworldNews/AK): ಚೀನಾದ ಟಿಯಾಂಜಿನ್ನಲ್ಲಿ ಶಾಂಘೈ ಸಹಕಾರ ಸಂಘಟನೆಯ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗಲಿದ್ದಾರೆ.

ಮುಂದಿನ ವಾರ ನಡೆಯುವ ಈ ಸಮಿಟ್ನಲ್ಲಿ 20ಕ್ಕೂ ಹೆಚ್ಚು ದೇಶಗಳ ಮುಖಂಡರು ಪಾಲ್ಗೊಳ್ಳಲಿದ್ದಾರೆ. ನರೇಂದ್ರ ಮೋದಿ ಅವರು ಇದರಲ್ಲಿ ಪಾಲ್ಗೊಳ್ಳಲಿರುವುದು ಗಮನಾರ್ಹ ಸಂಗತಿ. ಏಳು ವರ್ಷದ ಬಳಿಕ ನರೇಂದ್ರ ಮೋದಿ ಅವರು ಚೀನಾಗೆ ಮೊದಲ ಬಾರಿ ಕಾಲಿಡುತ್ತಿದ್ದಾರೆ. ಹೀಗಾಗಿ, ಸಾಕಷ್ಟು ಕುತೂಹಲಗಳು ಹುಟ್ಟಿಕೊಂಡಿವೆ.
ಆಗಸ್ಟ್ 31ರಿಂದ ಸೆಪ್ಟೆಂಬರ್ 1ರವರೆಗೆ ಎರಡು ದಿನಗಳ ಕಾಲ ನಡೆಯುವ ಈ ಬಾರಿಯ ಎಸ್ಸಿಒ ಸಮಿಟ್ ಜಗತ್ತಿಗೆ ಕೆಲ ಪ್ರಮುಖ ಸಂದೇಶಗಳನ್ನು ನೀಡುತ್ತಿದೆ. ಭಾರತದ ನೀತಿ ಮತ್ತು ಧೋರಣೆಯಲ್ಲಿ ಬದಲಾವಣೆ ಆಗುತ್ತಿರುವ ಸಂದೇಶ ರವಾನೆಯಾಗುತ್ತಿದೆ. ರಷ್ಯಾ, ಚೀನಾ ಮತ್ತು ಭಾರತ ಈ ಮೂರು ದೈತ್ಯ ಶಕ್ತಿಗಳು ಒಗ್ಗೂಡುತ್ತಿರುವ ಕುರುಹನ್ನು ಇದು ನೀಡಿದೆ. ಡೊನಾಲ್ಡ್ ಟ್ರಂಪ್ ಅವರ ಟ್ಯಾರಿಫ್ ಅಟ್ಟಹಾಸಕ್ಕೆ ಅಭಿವೃದ್ಧಿಶೀಲ ದೇಶಗಳು ತೋರಿರುವ ಪ್ರತಿರೋಧದ ಸಂಕೇತ ಇದೆಂದು ಹಲವರು ಪರಿಭಾವಿಸಿದ್ದಾರೆ.
2001ರಲ್ಲಿ ಚೀನಾ ನೇತೃತ್ವದಲ್ಲಿ ಸ್ಥಾಪನೆಯಾದ ಸಂಘಟನೆ ಇದು. ಚೀನಾ, ಕಜಕಸ್ತಾನ್, ಕಿರ್ಗಿಸ್ತಾನ್, ರಷ್ಯಾ, ತಜಿಕಿಸ್ತಾನ್ ಮತ್ತು ಉಜ್ಬೆಕಿಸ್ತಾನ್ ದೇಶಗಳಿಂದ ಮೊದಲು ಇದರ ಸ್ಥಾಪನೆಯಾಗಿದ್ದು. 2017ರಲ್ಲಿ ಭಾರತ ಮತ್ತು ಪಾಕಿಸ್ತಾನ ದೇಶಗಳು ಇದರಲ್ಲಿ ಸೇರ್ಪಡೆಯಾದವು. 2023ರ ನಂತರ ಇನ್ನೂ ಕೆಲ ದೇಶಗಳು ಸೇರಿದವು.