ನವದೆಹಲಿ, 27 (DaijiworldNews/AK): ಸಿಎಂ ಆಗುವ ವೇಗದಲ್ಲಿ ಹಿಂದೂಗಳಿಗೆ ಅಪಮಾನ ಮಾಡ್ತಿದ್ದೀರಿ ಎಂದು ಡಿ.ಕೆ ಶಿವಕುಮಾರ್ ವಿರುದ್ಧ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕಿಡಿಕಾರಿದ್ದಾರೆ.

ಸುದ್ದಿಗೋಷ್ಠಿ ನಡೆಸಿದ ಅವರು ಚಾಮುಂಡೇಶ್ವರಿ ಹಿಂದೂಗಳ ಆಸ್ತಿ ಅಲ್ಲ ಎಂಬ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ್ದಾರೆ. ರಾಜ್ಯದಲ್ಲಿ 3500 ಹೆಚ್ಚು ದೇವಸ್ಥಾನಗಳು ಹಿಂದೂಗಳ ಆಸ್ತಿ. ಸರ್ಕಾರದ ಆಸ್ತಿ ಎಂದರೆ ಮುಜುರಾಯಿ ಆಸ್ತಿ, ಮುಜುರಾಯಿ ಆಸ್ತಿಯಾದರೆ ಅದು ಹಿಂದೂಗಳ ಆಸ್ತಿ ಅಲ್ವ. ಸರ್ಕಾರದ ಆಸ್ತಿ ಹಿಂದೂಗಳದ್ದೂ ಅಲ್ಲ ಅಂದ್ರೆ ಏನು ಹೇಳಲು ಹೊರಟಿದ್ದಾರೆ. ಡಿಕೆ ಶಿವಕುಮಾರ್ಗೆ ಏನಾಗಿದೆ ನಿಮಗೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಡಿಕೆಶಿ ಅವರೇ ನೀವು ಮುಖ್ಯಮಂತ್ರಿಯಾಗುವ ಭರದಲ್ಲಿ ಹಿಂದೂಗಳಿಗೆ ಅಪಮಾನ ಮಾಡುತ್ತಿದ್ದೀರಿ. ಹಿಂದೂಗಳ ವಿಚಾರದಲ್ಲಿ ಸಂಶಯ ಹುಟ್ಟು ಹಾಕುತ್ತಿದ್ದೀರಿ. ಸರ್ಕಾರವನ್ನು ನೀವು ಬಿಟ್ಟು ಹೋಗಿ. ಹಿಂದೂ ಮಾನಸಿಕತೆ ಇರುವವರು ಬಂದು ಆಡಳಿತ ಮಾಡುತ್ತಾರೆ ಎಂದು ಹೇಳಿದರು.
ಭಾನು ಮುಸ್ತಾಕ್ ಅವರ ಬಗ್ಗೆ ವಿರೋಧ ಇಲ್ಲ. ಕನ್ನಡನಾಂಬೆಯನ್ನು ಒಪ್ಪದವರು ಚಾಮುಂಡೇಶ್ವರಿ ಅವರನ್ನು ಒಪ್ಪುತ್ತಾರಯೇ? ಹಳದಿ ಮತ್ತು ಕುಂಕುಮವನ್ನು ಒಪ್ಪಿಲ್ಲ ಅಂದರೆ ಇದನ್ನು ಒಪ್ಪುತ್ತಾರಾ ಎನ್ನುವುದಷ್ಟೇ ಪ್ರಶ್ನೆ ಎಂದಿದ್ದಾರೆ.
ಕರ್ನಾಟಕದಲ್ಲಿ ಬೇರೆ ಸಾಹಿತಿ ಸಿಗಲಿಲ್ವ? ಕನ್ನಡಾಂಬೆಯನ್ನು ಒಪ್ಪದವರಿಗೆ ಯಾಕೆ ಅವಕಾಶ ನೀಡಬೇಕು ಎಂದು ಕೇಳಿದ್ದೆ. ಮಹಾದೇವಪ್ಪ ಇದನ್ನು ಧಾರ್ಮಿಕ ಅಲ್ಲ ಸಾಂಸ್ಕೃತಿಕ ಹಬ್ಬ ಎಂದು ಹೇಳಿದ್ದರು. ದಸರಾ ಸಾಂಸ್ಕೃತಿಕ ಹಬ್ಬ ಎಂದು ಯಾವಾಗ ಆಯ್ತು? ನವರಾತ್ರಿ ಎಂದರೆ ದೇವಿಯ ಒಂಭತ್ತು ಅವತರಾಗಳು. ಮೈಸೂರು ರಾಜರು ಇದನ್ನು ಇನ್ನಷ್ಟು ವಿಜೃಂಭಣೆಯಿಂದ ಆಚರಿಸುತ್ತಾ ಬಂದಿದ್ದಾರೆ ಎಂದು ಹೇಳಿದ್ದಾರೆ.