ಮೈಸೂರು, ಅ. 17 (DaijiworldNews/AK): ಇನ್ಫೋಸಿಸ್ನವರು ಏನು ಬಹಳ ಬೃಹಸ್ಪತಿಗಳಾ ಎಂದು ಜಾತಿಗಣತಿ ಸಮೀಕ್ಷೆಗೆ ಒಪ್ಪದ ನಾರಾಯಣ ಮೂರ್ತಿ ದಂಪತಿಗೆ ಸಿಎಂ ಸಿದ್ದರಾಮಯ್ಯ ಟಾಂಗ್ ಕೊಟ್ಟರು.

ನಗರದಲ್ಲಿ ಮಾತನಾಡಿದ ಸಿಎಂ, ಇದು ಹಿಂದುಳಿದ ವರ್ಗದ ಜಾತಿ ಸಮೀಕ್ಷೆ ಅಲ್ಲ. ಎಲ್ಲಾ ಜಾತಿಗಳ ಸಮೀಕ್ಷೆ. ಇದನ್ನ ಅರ್ಥ ಮಾಡಿಕೊಳ್ಳದಿದ್ದರೆ ನಾವು ಏನು ಮಾಡುವುದು? ಇದು ಅಜ್ಞಾನವೋ ಉದ್ದೇಶಪೂರ್ವಕವೊ ಅವರಿಗೆ ಗೊತ್ತು ಎಂದು ತಿರುಗೇಟು ನೀಡಿದರು.
ಮೇಲ್ಜಾತಿಯವರು ಗೃಹಜ್ಯೋತಿ ಪಡೆಯುತ್ತಿಲ್ವಾ? ಮೇಲ್ಜಾತಿ ಮಹಿಳೆಯರು ಬಸ್ನಲ್ಲಿ ಉಚಿತವಾಗಿ ಓಡಾಡುತ್ತಿಲ್ವಾ? ಇದು ಕೂಡ ಅದೇ ರೀತಿ. ಎಲ್ಲಾ ಜಾತಿಯವರಿಗೆ ಮಾಡುತ್ತಿರುವ ಸಮೀಕ್ಷೆ ಎಂದು ಸ್ಪಷ್ಟಪಡಿಸಿದರು.