ಬೆಳಗಾವಿ,ಅ. 22 (DaijiworldNews/ AK): ಸಿಎಂ ಸಿದ್ದರಾಮಯ್ಯನವರ ನಂತರ ಕಾಂಗ್ರೆಸ್ ಪಕ್ಷವನ್ನು ಮುನ್ನಡೆಸುವವರು ಯಾರು ಎಂಬ ಪ್ರಶ್ನೆಗೆ ಪುತ್ರ ಯತೀಂದ್ರ (ಅವರು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ಹೆಸರನ್ನು ಮುನ್ನೆಲೆಗೆ ತಂದಿದ್ದಾರೆ.

ರಾಯಬಾಗ ತಾಲೂಕಿನ ಕಪ್ಪಲಗುದ್ದಿಯಲ್ಲಿ ನಡೆದ ಶ್ರೀ ಸಂತ ಕನಕದಾಸರ ಮೂರ್ತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವೈಚಾರಿಕವಾಗಿ ಪ್ರಗತಿಪರ ತತ್ವ ಸಿದ್ದಾಂತ ಇರುವ ನಾಯಕರು ಬೇಕು. ಸತೀಶ್ ಜಾರಕಿಹೊಳಿಯವರು ಈ ಜವಾಬ್ದಾರಿ ನಿಭಾಯಿಸುತ್ತಾರೆ ಎಂದು ಹೇಳಿದ್ದಾರೆ.
ತಂದೆಯವರ ರಾಜಕೀಯ ಕೊನೆ ಘಟ್ಟದಲ್ಲಿರುವ ಸಮಯದಲ್ಲಿ ಈ ರೀತಿ ವೈಚಾರಿಕವಾಗಿ ಪ್ರಗತಿಪರವಾಗಿ ಸಿದ್ದಾಂತ ಇಟ್ಟುಕೊಂಡಿರುವವರಿಗೆ ಮಾರ್ಗದರ್ಶನ, ನೇತೃತ್ವ ವಹಿಸಿಕೊಳ್ಳಲು ಒಬ್ಬ ನಾಯಕ ಬೇಕು. ಸತೀಶ್ ಜಾರಕಿಹೊಳಿಯವರು ಅಂತಹ ಜವಾಬ್ದಾರಿ ವಹಿಸಿಕೊಳ್ಳಲು ಸಮರ್ಥರಿದ್ದಾರೆ ಎಂದು ಹೇಳಿದ್ದಾರೆ.