ಬೆಂಗಳೂರು, ನ. 02 (DaijiworldNews/AA): ನಮಗೆ ಹೈಕಮಾಂಡ್ ದೇವಸ್ಥಾನ, ಹೆಡ್ ಆಫೀಸ್ ಇದ್ದಂತೆ. ಸತೀಶ್ ಜಾರಕಿಹೊಳಿ ದೆಹಲಿ ಭೇಟಿಗೆ ವಿಶೇಷ ಅರ್ಥ ಕಲ್ಪಿಸುವುದು ಬೇಡ ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಹೈಕಮಾಂಡ್ ನಮಗೆ ಕಾಂಗ್ರೆಸ್ ದೇವಸ್ಥಾನ ಇದ್ದಂಗೆ, ಅದು ಹೆಡ್ ಆಫೀಸ್. ಅವರು ಹೋಗೋದಾದ್ರೆ ಅವರು ಹೋಗ್ಲಿ ಬಿಡಿ. ಶಾಸಕರು, ಸಚಿವರು ಹೋಗೋದಾದ್ರೆ ಹೋಗ್ಲಿ. ಕೆಲವರಿಗೆ ಚುನಾವಣೆ ಜವಾಬ್ದಾರಿ ಕೊಟ್ಟಿದ್ದಾರೆ. ರಿಜ್ವಾನ್, ಸುರೇಶ್, ಶ್ರೀನಿವಾಸ್ಗೆ ಜವಾಬ್ದಾರಿ ಕೊಟ್ಟಿದ್ದಾರೆ, ಸಂಘಟನೆಗೆ ಕಳಿಸಿದ್ದಾರೆ. ಅವರ ಕೆಲಸಕ್ಕೆ ಹೋಗೋದಕ್ಕೆ ಬೇಡ ಅನ್ನೋಕೆ ಆಗುತ್ತಾ?" ಎಂದು ಪ್ರಶ್ನಿಸಿದರು.
"ಅವರವರ ಕೆಲಸಕ್ಕೆ ದೆಹಲಿಗೆ ಹೋಗ್ತಾರೆ. 5-6ಕ್ಕೆ ನಾನೂ ಬಿಹಾರಕ್ಕೆ ಹೋಗ್ತಿದ್ದೇನೆ. ಸೆಂಟ್ರಲ್ ಮಿನಿಸ್ಟರ್ ಸಭೆ ಕರೆದಿದ್ದಾರೆ. ಇನ್ನೊಂದಿನ ಕಾವೇರಿ ಕೇಸ್ ಇದೆ, ಮತ್ತೊಂದಿನ ನನ್ನದೊಂದು ಬುಕ್ ರಿಲೀಸ್ ಕಾರ್ಯಕ್ರಮ ಇದೆ. ದೆಹಲಿಗೆ ಹೋದ್ರೆ ನಾವು ರಾಜಕೀಯಕ್ಕಾಗಿಯೇ ಹೋಗ್ತಿದ್ದೇನೆ ಅಂತ ಯಾಕೆ ಅಂದುಕೊಳ್ಳುತ್ತೀರಿ?" ಎಂದು ಕೇಳಿದ್ದಾರೆ.