ಪಾಟ್ನಾ, ನ. 16 (DaijiworldNews/AK):ಬಿಹಾರ ಚುನಾವಣೆಯಲ್ಲಿ ಆರ್ಜೆಡಿ ಸೋಲು ಕಾಣುತ್ತಿದ್ದಂತೆ ಆರ್ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಪುತ್ರಿ ರೋಹಿಣಿ ಆಚಾರ್ಯ ಪಕ್ಷ ಹಾಗೂ ಕುಟುಂಬದಿಂದ ಹೊರಬಂದಿದ್ದಾರೆ. ತನ್ನ ಸಹೋದರ ತೇಜಸ್ವಿ ಯಾದವ್ ತನ್ನನ್ನು ಮನೆಯಿಂದ ಹೊರ ಹಾಕಿದ್ದಾನೆ ಎಂದು ದೂರಿದ್ದಾರೆ.

ಅಲ್ಲದೆ ಸಂಬಂಧಿಕರು ತಾನು ತನ್ನ ತಂದೆಗೆ ನೀಡಿರುವ ಕಿಡ್ನಿ ಬಗ್ಗೆಯೂ ಮಾತನಾಡಿದ್ದು, ಕೊಳಕು ಮೂತ್ರಪಿಂಡಕ್ಕೆ ಬದಲಾಗಿ ಚುನಾವಣಾ ಟಿಕೆಟ್ ಖರೀದಿಸಿದ್ದಾರೆ ಎಂದು ಆರೋಪಿಸಿದ್ದರು. ಇದು ತುಂಬಾ ಬೇಸರ ತಂದಿತ್ತು ಎಂದು ಹೇಳಿಕೊಂಡಿದ್ದಾರೆ. ಒಟ್ಟಿನಲ್ಲಿ ಚುನಾವಣೆ ಮುಗಿಯುತ್ತಿದ್ದಂತೆ ಲಾಲು ಪ್ರಸಾದ್ ಯಾದವ್ ಕುಟುಂಬದಲ್ಲಿದ್ದ ದ್ವೇಷ ಬೀದಿಗೆ ಬಂದಿದೆ.
ಆರ್ಜೆಡಿ ನಾಯಕಿ ತಮ್ಮ ಕುಟುಂಬದೊಂದಿಗಿನ ಸಂಬಂಧವನ್ನು ಕಡಿದುಕೊಂಡಿದ್ದು,ಹಿರಿಯ ಮಗ ತೇಜ್ ಪ್ರತಾಪ್ ಅವರನ್ನು ಪಕ್ಷದಿಂದ ಹೊರಹಾಕಿದ ನಂತರ ಯಾದವ್ ಕುಟುಂಬಕ್ಕೆ ಎದುರಾಗಿರುವ ಎರಡನೇ ಬಿಕ್ಕಟ್ಟು ಇದಾಗಿದೆ. ರಾಜಕೀಯದಿಂದ ನಿರ್ಗಮಿಸುವುದಾಗಿ ಘೋಷಿಸಿದ್ದಾರೆ. ತೇಜ್ ಪ್ರತಾಪ್ ತಮ್ಮದೇ ಆದ ಪಕ್ಷವನ್ನು ಸ್ಥಾಪಿಸಿ ಬಿಹಾರ ಚುನಾವಣೆಯಲ್ಲಿ ಏಕಾಂಗಿ ಸ್ಪರ್ಧೆಯನ್ನು ನಡೆಸಿದರು. ಇಂದು ರೋಹಿಣಿ ಸಾಮಾಜಿಕ ಜಾಲತಾಣಗಳಲ್ಲಿ ಎರಡು ಭಾವನಾತ್ಮಕ ಪೋಸ್ಟ್ಗಳನ್ನು ಮಾಡಿದ್ದಾರೆ.