ನವದೆಹಲಿ, ನ. 18 (DaijiworldNews/AA): ಆತ್ಮಾಹುತಿ ಬಾಂಬ್ ದಾಳಿಯೆಂಬುದು ಹುತಾತ್ಮರ ಕಾರ್ಯಾಚರಣೆ ಎಂದು ಇಸ್ಲಾಂನಲ್ಲಿ ತಿಳಿಸಲಾಗಿದೆ ಎಂದು ಬಾಂಬರ್ ಉಮರ್ ಕೆಂಪುಕೋಟೆ ಬಳಿ ಕಾರು ಸ್ಫೋಟಕ್ಕೂ ಮುನ್ನ ಮಾಡಿದ್ದ ವಿಡಿಯೋವೊಂದರಲ್ಲಿ ಹೇಳಿರುವುದು ಇದೀಗ ಬೆಳಕಿಗೆ ಬಂದಿದೆ.

ವೈರಲ್ ಆದ ವಿಡಿಯೋದಲ್ಲಿ ಉಮರ್ ಮಾತನಾಡುತ್ತಾ, "ಆತ್ಮಾಹುತಿ ಬಾಂಬ್ ದಾಳಿ ಬಗ್ಗೆ ತಪ್ಪಾಗಿ ಅರ್ಥೈಸಲಾಗಿದೆ. ಇದು ಯಾವುದೇ ರೀತಿಯ ಪ್ರಜಾಪ್ರಭುತ್ವವಲ್ಲ ಅಥವಾ ಯಾವುದೇ ನಾಗರಿಕ ಸಮಾಜದಲ್ಲಿ ಇದನ್ನು ಸ್ವೀಕರಿಸಲು ಸಾಧ್ಯವಿಲ್ಲ. ಇಸ್ಲಾಂನಲ್ಲಿ ಆತ್ಮಹತ್ಯೆಗೆ ಅವಕಾಶವಿಲ್ಲ. ಹೀಗಾಗಿ ಇದನ್ನು ಹುತಾತ್ಮರ ಕಾರ್ಯಾಚರಣೆ ಎಂದು ತಿಳಿಸಲಾಗಿದೆ. ಈ ಬಗ್ಗೆ ಹಲವು ಪರ-ವಿರೋಧ ವಾದಗಳಿವೆ" ಎಂದು ಹೇಳಿದ್ದಾನೆ.
"ಆತ್ಮಾಹುತಿ ದಾಳಿಯ ಬಹುದೊಡ್ಡ ಸಮಸ್ಯೆ ಏನೆಂದರೆ, ಒಬ್ಬ ವ್ಯಕ್ತಿ ಒಂದು ನಿರ್ದಿಷ್ಟ ಸ್ಥಳದಲ್ಲಿ, ನಿರ್ದಿಷ್ಟ ಸಮಯದಲ್ಲಿ ಸಾಯುವುದು ಖಚಿತ. ಆದರೆ ಹೇಗೆ? ಯಾವಾಗ ಸಾಯುತ್ತಾನೆ ಎನ್ನುವುದನ್ನು ಉಹಿಸಲು ಸಾಧ್ಯವಿಲ್ಲ ಎಂದು ಗೊತ್ತಾದಾಗ ಅವನ ಮನಸ್ಥಿತಿ ಅಪಾಯಕಾರಿ ಸ್ಥಿತಿಯಲ್ಲಿರುತ್ತದೆ. ಸಾವು ಅವರ ಅಂತಿಮ ನೆಲೆ ಎಂದು ನಂಬಿರುತ್ತಾರೆ. ಯಾರೂ ಸಾವಿಗೆ ಹೆದರಬೇಡಿ" ಎಂದಿದ್ದಾನೆ.
ಈ ವಿಡಿಯೋ ಬೆಳಕಿಗೆ ಬಂದ ಬೆನ್ನಲ್ಲೇ ದೆಹಲಿ ಕೆಂಪು ಕೋಟೆ ಬಳಿ ಕಾರು ಸ್ಫೋಟ ಒಂದು ಯೋಜಿತ ಕೃತ್ಯ ಎಂಬುದು ಸ್ಪಷ್ಟವಾಗಿದೆ. ಈ ಪ್ರಕರಣ ಸಂಬಂಧ ಎನ್ಐಎ ತನಿಖೆ ನಡೆಸುತ್ತಿದ್ದು, ಒಂದೊಂದಾಗಿಯೇ ಮಾಹಿತಿಗಳು ಹೊರಬರುತ್ತಿವೆ.