ಬೆಂಗಳೂರು, ಜು 15 (DaijiworldNews/SM): ಐಎಂಎ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕ ರೋಷನ್ ಬೇಗ್ ರನ್ನು ಎಸ್ ಐಟಿ ಅಧಿಕಾರಿಗಳು ಬಂಧಿಸಿದ್ದಾರೆ.
ರೋಷನ್ ಬೇಗ್ ಶಿವಾಜಿನಗರದ ಕೈ ಶಾಸಕರಾಗಿದ್ದು, ಐಎಂಎ ಬಹುಕೋಟಿ ವಂಚನೆ ಪ್ರಕರಣದ ಆರೋಪದ ಮೇಲೆ ಅವರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಬೆಂಗಳೂರಿನಿಂದ ಮುಂಬೈಗೆ ತೆರಳಲು ಬೇಗ್ ಸಿದ್ಧತೆಗಳಾನ್ನು ನಡೆಸುತ್ತಿದ್ದರು. ಸರಕಾರ ಉಳಿಯೋದಿಲ್ಲ ಎಂಬ ಬಗ್ಗೆ ಖಾಚಿತಗೊಳ್ಳುತ್ತಿದ್ದಂತೆ ಅತೃಪ್ತರ ಬಣ ಸೇರಿಕೊಳ್ಳಲು ರೋಷನ್ ಬೇಗ್ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ತೆರಳಿದ್ದರು.
ಈ ಬಗ್ಗೆ ಖಚಿತ ಮಾಹಿತಿ ಪಡೆದಂತಹ ಎಸ್ ಐಟಿ ಅಧಿಕಾರಿ ಗಿರೀಶ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ರೋಷನ್ ಬೇಗ್ ಅವರನ್ನು ವಶಕ್ಕೆ ಪಡೆದುಕೊಂಡಿದೆ.