ಮುಂಬೈ, ಜ. 11 (DaijiworldNews/TA): ಮುಂಬೈನ ಆಂಟೋಪ್ ಹಿಲ್ ಪ್ರದೇಶದಲ್ಲಿ ಸಾಕು ನಾಯಿ ಬೊಗಳಿದ್ದಕ್ಕೆ 15 ವರ್ಷದ ಬಾಲಕನಿಗೆ ಚಾಕು ಇರಿದ ಘಟನೆ ನಡೆದಿದೆ.

ದೂರುದಾರ ನರೇಶ್ ಉದಯಭನ್ ಬಿಡ್ಲಾನ್ (47), ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ನಲ್ಲಿ ನೈರ್ಮಲ್ಯ ಕೆಲಸಗಾರರಾಗಿದ್ದಾರೆ. ಅವರು ತಮ್ಮ ಪತ್ನಿ ವಂದನಾ ಮತ್ತು 15 ವರ್ಷದ ಅಳಿಯ ಆರ್ಯನ್ ಕಗಾದ್ರಾ ಅವರೊಂದಿಗೆ ತಮ್ಮ ಸಾಕು ನಾಯಿಯನ್ನು ವಾಕಿಂಗ್ಗೆ ಕರೆದುಕೊಂಡು ಹೋಗಿ, ರಾಜ್ ಹೈಟ್ಸ್ ಟವರ್ನಲ್ಲಿ ತಮ್ಮ ನಿವಾಸಕ್ಕೆ ಹಿಂತಿರುಗಿದಾಗ, ಲಿಫ್ಟ್ಗಾಗಿ ಕಾಯುತ್ತಿರುವಾಗ, ನಾಯಿ ಬೊಗಳಿದೆ. ಈ ಸನ್ನಿವೇಶವು ಕೆಲ ಜನರೊಂದಿಗೆ ಗಲಾಟೆಗೆ ಕಾರಣವಾಯಿತು.
ಈ ವೇಳೆ ಅಪರಿಚಿತ ವ್ಯಕ್ತಿಯೊಬ್ಬ ಹುಡುಗನ ಬೆನ್ನಿಗೆ ಮತ್ತು ತೋಳಿಗೆ ಚಾಕು ಇರಿದಿದ್ದಾನೆ. ಈ ಹಲ್ಲೆಯಲ್ಲಿ, ಬಿಳ್ಡಾನ್ ಅವರ ಪತ್ನಿ ವಂದನಾ ಕೂಡ ಗಾಯಗೊಂಡಿದ್ದಾರೆ, ಮತ್ತು ತಮ್ಮ ಮಂಗಳಸೂತ್ರ ಕೂಡ ಹರಿದುಹೋಗಿದೆ ಎಂದು ವರದಿಯಾಗಿದ್ದು, ಗಾಯಗೊಂಡ ಕುಟುಂಬ ಸದಸ್ಯರನ್ನು ಸಿಯಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಆಂಟೋಪ್ ಹಿಲ್ ಪೊಲೀಸರು, ನಿತಿನ್ ದಿಕ್ಕಾ, ತುಷಾರ್, ಸವಿತಾ, ಅಮನ್, ಕವಿತಾ ಮತ್ತು ಶರಣಜೀತ್ ಸೇರಿದಂತೆ ಹಲವರ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.