ಜುಬಾ, ಜ. 12 (DaijiworldNews/AA): ದಕ್ಷಿಣ ಸೂಡಾನ್ನಲ್ಲಿ ನಡೆಯುತ್ತಿರುವ ಯುಎನ್ ಮಿಷನ್ನಲ್ಲಿ ಉತ್ತಮ ಸೇವೆ ಸಲ್ಲಿಸಿದ ಬೆಂಗಳೂರು ಮೂಲದ ಮೇಜರ್ ಸ್ವಾತಿ ಶಾಂತಕುಮಾರ್ ಅವರ 'ಸಮಾನ ಪಾಲುದಾರರು, ಶಾಶ್ವತ ಶಾಂತಿ' ಎಂಬ ಯೋಜನೆಗಾಗಿ 2025 ರ ವಿಶ್ವಸಂಸ್ಥೆ ಸೆಕ್ರೆಟರಿ ಜನರಲ್ ಪ್ರಶಸ್ತಿ ಲಭಿಸಿದೆ.

ಯುಎನ್ ಸೆಕ್ರೆಟರಿ ಜನರಲ್ ಅಂಟೋನಿಯೊ ಗುಟೆರೆಸ್ ಅವರು ಈ ಪ್ರಶಸ್ತಿ ಘೋಷಿಸಿದ್ದಾರೆ. ಸಮಾನ ಪಾಲುದಾರರು, ಶಾಶ್ವತ ಶಾಂತಿ ಎಂಬ ಯೋಜನೆಗಾಗಿ 2025 ರ ಪ್ರಧಾನ ಕಾರ್ಯದರ್ಶಿ ಪ್ರಶಸ್ತಿ ಲಭಿಸಿದೆ. ವಿಶ್ವದಾದ್ಯಂತದ ಎಲ್ಲಾ ಯುಎನ್ ಶಾಂತಿಪಾಲನಾ ಮಿಷನ್ಗಳು ಮತ್ತು ಏಜೆನ್ಸಿಗಳಿಂದ ಬಂದ ನಾಮನಿರ್ದೇಶನಗಳ ಪೈಕಿ ಫೈನಲ್ಗೆ ನಾಲ್ಕು ತಂಡಗಳು ಆಯ್ಕೆಯಾಗಿದ್ದವು. ಈ ತಂಡಗಳ ಪೈಕಿ ಭಾರತೀಯ ತಂಡ ಅತಿ ಹೆಚ್ಚು ಮತಗಳನ್ನು ಪಡೆದು ಜಯಶಾಲಿಯಾಗಿದೆ.
ಮೇಜರ್ ಸ್ವಾತಿ ಅವರ ನೇತೃತ್ವದಲ್ಲಿ ಭಾರತೀಯ ತಂಡವು ಗ್ರಾಮೀಣ ಮಟ್ಟದಲ್ಲಿ ಶಾಂತಿ ಸ್ಥಾಪನೆಗೆ ಅಪಾರ ಕೊಡುಗೆ ನೀಡಿದೆ. ದೂರದ ಪ್ರದೇಶಗಳಲ್ಲಿ ಸಣ್ಣ-ದೊಡ್ಡ ಪೇಟ್ರೋಲಿಂಗ್, ನದಿ ಪ್ರದೇಶದ ಪೇಟ್ರೋಲ್ ಮತ್ತು ಡೈನಾಮಿಕ್ ಏರ್ ಪೇಟ್ರೋಲ್ಗಳನ್ನು ಯಶಸ್ವಿಯಾಗಿ ನಡೆಸಿ, ಸಂಘರ್ಷ ಪೀಡಿತ ದೇಶದಲ್ಲಿ 5,000ಕ್ಕೂ ಹೆಚ್ಚು ಮಹಿಳೆಯರಿಗೆ ಸುರಕ್ಷಿತೆ ಒದಗಿಸಿದೆ.
ಪ್ರಸ್ತುತ ದಕ್ಷಿಣ ಸುಡಾನ್ನಲ್ಲಿ ಸ್ವಾತಿ ಶಾಂತಕುಮಾರ್ ಸೇವೆ ಸಲ್ಲಿಸುತ್ತಿದ್ದಾರೆ.