ಬೆಂಗಳೂರು, ಜ. 13 (DaijiworldNews/AA): ಇಲ್ಲಿನ ಆಸ್ತಿಗಳನ್ನ ಅಡಮಾನ ಇಟ್ಟಿದ್ದು ಬಿಟ್ಟರೆ ಬೆಂಗಳೂರಿಗೆ ಜೆಪಿ ಸಾಧನೆ ಏನು ಇಲ್ಲ. 5 ಪಾಲಿಕೆಯಲ್ಲಿ ಕಾಂಗ್ರೆಸ್ ಗೆಲ್ಲಲಿದೆ ಎಂದು ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಅವರು, "ಬೆಂಗಳೂರು ಅಭಿವೃದ್ಧಿಗೆ ಕಾಂಗ್ರೆಸ್ ಹೆಚ್ಚು ಕೊಡುಗೆ ಕೊಟ್ಟಿದೆ. ಬೆಂಗಳೂರಿಗೆ ಏರ್ಪೋರ್ಟ್, ಮೆಟ್ರೋ ತಂದಿದ್ದೇವೆ. ಬಿಜೆಪಿಯವರು 14 ಕಟ್ಟಡಗಳನ್ನು ಅಡ ಇಟ್ಟು ಹೋಗಿದ್ದರು. 6,000 ಕೋಟಿ ರೂ. ಸಾಲ ಇಟ್ಟು ಹೋಗಿದ್ದರು. ಇದೇ ಅವರ ಸಾಧನೆ. ನಾವು ಸಾಲ ತೀರಿಸಿ ಕಟ್ಟಡಗಳನ್ನ ಬಿಡಿಸಿಕೊಂಡಿದ್ದೇವೆ. ಟ್ರಾಫಿಕ್ ಕಡಿಮೆ ಆಗೊದಕ್ಕೆ 50 ಕಿ.ಮಿ ಫ್ಲೈ ಒವರ್ ಮಾಡುತ್ತಿದ್ದೇವೆ. ಟನಲ್ ರೋಡ್ ಬಗ್ಗೆ ಬಿಜೆಪಿಯವರು ಟೀಕೆ ಮಾಡ್ತಾರೆ. ಆದರೆ ಮುಂಬೈನಲ್ಲಿ ಎರಡು ಟನಲ್ ರಸ್ತೆ ಪ್ರಾರಂಭ ಮಾಡಿದ್ದಾರೆ. ಕಸದ ಸಮಸ್ಯೆ ಇದೆ, ಅದಕ್ಕಾಗಿ ಹಲವು ಯೋಜನೆ ಮಾಡ್ತಿದ್ದೇವೆ. ಮಹಿಳೆಯರಿಗೆ ಬೆಂಗಳೂರಿನಲ್ಲಿ ಉದ್ಯೋಗ ಸೃಷ್ಟಿಯಾಗಿದೆ" ಎಂದು ತಿಳಿಸಿದರು.
ಬಿಜೆಪಿ, ಜೆಡಿಎಸ್ ಮೈತ್ರಿ ಸವಾಲು ಆಗಲ್ವಾ ಎಂಬ ವಿಚಾರವಾಗಿ ಮಾತನಾಡಿ, "ಅವರು ಪಾರ್ಲಿಮೆಂಟ್ ಎಲೆಕ್ಷನ್ನಲ್ಲಿ ಮೈತ್ರಿ ಮಾಡಿಕೊಂಡಿದ್ದಾರೆ. ಟೀಚರ್ಸ್ ಎಲೆಕ್ಷನ್ನಲ್ಲಿ ಮೈತ್ರಿ ಇದ್ದರೂ ನಾವು ಗೆದ್ವಿ. 6 ರಲ್ಲಿ ನಾವು 4 ಸ್ಥಾನ ಗೆದ್ದಿದ್ದೇವೆ. ಅವರು ಎರಡು ಮಾತ್ರ ಸ್ಥಾನ ಗೆದ್ದಿದ್ದಾರೆ. ಜಿಬಿಎದಲ್ಲೂ ನಾವು ಗೆಲ್ತೀವಿ" ಎಂದರು.
"ನಾಯಕತ್ವ ಫೈಟ್ ನಡುವೆ ಚುನಾವಣೆ ವಿಚಾರಕ್ಕೆ ಮಾಧ್ಯಮಗಳು ಸುಮ್ಮನೆ ಇರೋದಕ್ಕೆ ಬಿಡಲ್ಲ. ನಮ್ಮ ಶಾಸಕರು ಮೈಕ್ ಹಿಡಿದಾಗ ಏನಾದರೂ ಮಾತಾಡ್ತಾರೆ. ನೀವು ಸುಮ್ಮನೆ ಇರಿ. ಸಿಎಂ-ಡಿಸಿಎಂ ರಾಹುಲ್ ಗಾಂಧಿ ಭೇಟಿ ವಿಚಾರಕ್ಕೆ ರಾಹುಲ್ ಗಾಂಧಿ ಸಹಜವಾಗಿ ವಯನಾಡಿಗೆ ಹೋಗ್ತಿರುತ್ತಾರೆ. ವಯನಾಡು ಅವರ ಹಳೆ ಕ್ಷೇತ್ರ. ಮೈಸೂರಿಗೆ ಬಂದು ಹೋಗಬೇಕಲ್ವಾ, ಅದಕ್ಕೆ ಸಿಎಂ, ಡಿಸಿಎಂ ಹೋಗಿ ಮಾತಾಡ್ತಾರೆ" ಎಂದು ಹೇಳಿದರು.